ಹಾವೇರಿ ;- ಲೋಕಾ ಅಧಿಕಾರಿಗಳು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಬೆಳ್ಳಂ ಬೆಳಗೆ ಶಾಕ್ ನೀಡಿದ್ದಾರೆ.ಇಬ್ಬರು ಆರ್ ಎಫ್ ಓ ಗಳ ಮನೆ, ಸೇರಿದಂತೆ 9 ಕಡೆ ಲೋಕಾ ದಾಳಿ ನಡೆದಿದೆ. ಆರ್ ಎಪ್ ಓ ಪರಮೇಶ್ವರ ಪೇಲನವರ, ಆರ್ ಎಫ್ ಓ ಮಹಾಂತೇಶ ನ್ಯಾಮತಿ ಗೆ ಸೇರಿದ 9 ಕಡೆ ದಾಳಿ ನಡೆದಿದೆ.
Advertisement
ಹಾವೇರಿ, ಕುರಬಗೊಂಡ ಗ್ರಾಮದಲ್ಲಿ ದಾಳಿ ನಡೆದಿದ್ದು, ಪರಮೇಶ್ವರ ಪೇಲನವರಗೆ ಸೇರಿದ ಮೂರು ಮನೆ ಸೇರಿದಂತೆ 6 ಕಡೆ ದಾಳಿ ನಡೆದಿದೆ. ನ್ಯಾಮತಿಗೆ ಸೇರಿದ ಮನೆ ಸೇರಿದಂತೆ ಮೂರು ಕಡೆ ದಾಳಿ ನಡೆದಿದೆ.ಹಾವೇರಿಯ ಶಿವಾಜಿನಗರ, ವರದಾನೇಶ್ವರಿ ನಗರ, ಕುರುಬಗೊಂಡ ಗ್ರಾಮದ ಮನೆ, ಫಾಮ್೯ ಹೌಸ್ ಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.