ವಿಜಯಸಾಕ್ಷಿ ಸುದ್ದಿ, ಬೆಟಗೇರಿ : ಇಲ್ಲಿಯ ಎಸ್‌ಎಸ್‌ಕೆ ಸಮಾಜ ಪಂಚ ಟ್ರಸ್ಟ್ ಕಮಿಟಿಯ ಸರ್ವ ಸಾಧಾರಣ ಸಭೆ ಬೆಟಗೇರಿಯ ಶ್ರೀಮತಿ ಮುನ್ನೂಬಾಯಿ ಈಶ್ವರಸಾ ಖೋಡೆ ಕಲ್ಯಾಣ ಮಂಟಪದಲ್ಲಿ ಜರುಗಿತು. ಸಭೆಯಲ್ಲಿ 2024ರಿಂದ 2027ರವರೆಗಿನ ಮೂರು ವರ್ಷದ ಅವಧಿಗೆ ನೂತನ ಪದಾಧಿಕಾರಿಗಳು ಹಾಗೂ ಸದಸ್ಯರನ್ನು ಆಯ್ಕೆಯನ್ನು ಮಾಡಲಾಯಿತು.
ಅಧ್ಯಕ್ಷರಾಗಿ ಲೋಕನಾಥ ಬಿ.ಕಬಾಡಿ, ಉಪಾಧ್ಯಕ್ಷರಾಗಿ ದತ್ತು ಯು.ಪವಾರ, ಗೌ.ಕಾರ್ಯದರ್ಶಿಯಾಗಿ ಗೋವಿಂದರಾಜ ವ್ಹಿ.ಬಸವಾ, ಸಹಕಾರ್ಯದರ್ಶಿಯಾಗಿ ಪ್ರಕಾಶ ಎಮ್.ಮಿಸ್ಕಿನ್, ಲೆಕ್ಕ ತಪಾಸಿಗರಾಗಿ ಸತ್ಯನಾರಾಯಣ ಆರ್.ಕಬಾಡಿ, ಸದಸ್ಯರುಗಳಾಗಿ ಶಂಕರಸಾ ಸಿ.ಮೇಹರವಾಡೆ, ರಘುನಾಥಸಾ ಜಿ.ಮೇರವಾಡೆ, ನಾರಾಯಣಸಾ ಜಿ.ಮೇರವಾಡೆ, ಶ್ರೀಧರ ಕೆ.ಬಾಕಳೆ, ಮಂಜುನಾಥ ಆರ್.ಕಬಾಡಿ, ಅರುಣ ಆರ್.ಮಿಸ್ಕಿನ್, ಚಂದ್ರಕಾಂತ ಡಿ.ಮೇತ್ರಾಣಿ ಇವರುಗಳನ್ನು ಆಯ್ಕೆ ಮಾಡಲಾಯಿತು. ಆಯ್ಕೆಯಾದ ಎಲ್ಲ ಪದಾಧಿಕಾರಿಗಳಿಗೆ ಹಾಗೂ ಸದಸ್ಯರಿಗೆ ಎಸ್‌ಎಸ್‌ಕೆ ಸಮಾಜ ಬಾಂಧವರು ಅಭಿನಂದಿಸಿದ್ದಾರೆ.