ಕೋಲಾರ:- ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ಗಂಡನನ್ನು ಬಿಟ್ಟು ಆತನ ಸ್ನೇಹಿತನೊಂದಿಗೆ ಲವ್ ಬಲೆಗೆ ಬಿದ್ದಿದ್ದ ವಿವಾಹಿತ ಮಹಿಳೆ ಇದೀಗ ಬೀದಿಪಾಲಾಗಿರುವ ಘಟನೆ ಜರುಗಿದೆ.
ಗಂಡನನ್ನು ಬಿಟ್ಟು ಪ್ರಿಯಕರನನ್ನು ನಂಬಿ ಹೋದ ಮಹಿಳೆ, ಇದೀಗ ಬೀದಿ ಪಾಲಾಗಿದ್ದು, ಗಂಡನ ಸ್ನೇಹಿತ ಪ್ರಿಯಕರನ ಮನೆ ಮುಂದೆ ಪ್ರತಿಭಟನೆ ಮಾಡುತ್ತಿದ್ದಾಳೆ. ಬೆಂಗಳೂರಿನಲ್ಲಿ ಇರುವಾಗ ಪತಿ ಹರೀಶ್ ಸ್ನೇಹಿತ ಅಮರನಾಥ್ ನ ಪರಿಚಯವಾಗಿದ್ದು, ಬಳಿಕ ಆತನೊಂದಿಗೆ ಸ್ನೇಹ ಬೆಳೆದಿದೆ. ನಂತರ ಅದು ಪ್ರೀತಿಗೆ ತಿರುಗಿದ್ದು, ಮದುವೆ ಮಾಡಿಕೊಳ್ಳುವುದಾಗಿ ಅಮರನಾಥ್ ಹೇಳಿದ್ದಾನೆ.
ಇದನ್ನೇ ನಂಬಿದ ಸಂಯುಕ್ತಾ ಗಂಡನ ಸ್ನೇಹಿತ ಅಮರನಾಥನ ಜೊತೆ ಬಂದಿದ್ದಾಳೆ. ಅಮರನಾಥ್ ಹಾಗೂ ಸಂಯುಕ್ತ ಕಳೆದ 3 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇದೀಗ ಸಂಯುಕ್ತಾ ಐದು ತಿಂಗಳು ಗರ್ಭಿಣಿ ಎಂದು ಗೊತ್ತಾಗುತ್ತಿದ್ದಂತೆಯೇ ಪ್ರಿಯಕರ ಅಮರನಾಥ್ ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದಾನೆ. ಇದರಿಂದ ಕಂಗಾಲಾದ ಸಂಯುಕ್ತ, ನ್ಯಾಯಾಕ್ಕಾಗಿ ಪ್ರಿಯಕರನ ಮನೆ ಮುಂದೆ ಧರಣಿ ನಡೆಸಿದ್ದಾಳೆ.
ಅತ್ತ ಕೈಹಿಡಿದ ಗಂಡನನ್ನು ಬಿಟ್ಟು ಬಂದ ಮಹಿಳೆ ಪ್ರಿಯಕರ ಕೈ ಕೊಟ್ಟಿದ್ದಾನೆ.