ಹುಬ್ಬಳ್ಳಿ;- ಲವ್ ಜಿಹಾದ್ ಆರೋಪ ಹೊತ್ತಿರುವ ಯೂಟ್ಯೂಬರ್ ಕ್ವಾಜಾ ಅಲಿಯಾಸ್ ಮುಕಳೆಪ್ಪ ಪರ ಹೆಂಡ್ತಿ ಗಾಯತ್ರಿ ಬ್ಯಾಟಿಂಗ್ ಮಾಡಿದ್ದಾರೆ.
ತನ್ನ ತಂದೆ ತಾಯಿ ವಿರುದ್ಧವೇ ತಿರುಗಿ ಬಿದ್ದಾಳೆ. ನಮ್ಮ ಮದುವೆಗೆ ನಮ್ಮ ತಾಯಿ ಒಪ್ಪಿಗೆ ಇತ್ತು. ಈಗ ಯಾರೋ ಹೇಳಿರುವ ಮಾತು ಕೇಳಿ ನನ್ನ ಹಾಗೂ ಮುಕಳೆಪ್ಪ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಮತ್ತೊಂದು ಟ್ವಿಸ್ಟ್ ನೀಡಿದ್ದಾಳೆ.
ಭಾನುವಾರ ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣೆಗೆ ಹಿಂದೂಪರ ಸಂಘಟನೆಗಳ ಬೆಂಬಲದಿಂದ ಗಾಯತ್ರಿ ಪೋಷಕರು ದೂರು ದಾಖಲಿಸಿದ್ದರು. ಮುಕಳೆಪ್ಪ ತಪ್ಪು ಮಾಹಿತಿ ನೀಡಿದ್ದಾನೆ. ಮೊದಲಿಗೆ ತಾನು ಮುಸ್ಲಿಂ ಎನ್ನುವ ಸಂಗತಿ ಮುಚ್ಚಿಟ್ಟಿದ್ದ. ಇನ್ನೂ ಗಾಯತ್ರಿ ತನ್ನ ತಂಗಿಯ ರೀತಿ ಎಂದು ಹೇಳಿ ನಂಬಿಸಿದ್ದ.
ಅಲ್ಲದೆ ಇವರಿಬ್ಬರ ಮದುವೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಹೀಗಿದ್ದರೂ ಮಗಳ ತಲೆಕೆಡಿಸಿ ಮುಕಳೆಪ್ಪ ಬಲವಂತವಾಗಿ ಮದುವೆ ಆಗಿದ್ದಾನೆ ಎಂದು ಯುವತಿ ಪೋಷಕರು ಆರೋಪಿಸಿದ್ದರು ಮುಕಳೆಪ್ಪ ವಿರುದ್ಧ ದಾಖಲಾಗಿರುವ ಅಪಹರಣ ಮತ್ತು ಜೀವ ಬೆದರಿಕೆ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.