ಮಹಾಂತ ಶಿವಯೋಗಿ ಜಾತ್ರಾ ಮಹೋತ್ಸವ

0
mahanta
Spread the love

ವಿಜಯಸಾಕ್ಷಿ ಸುದ್ದಿ, ಮುಳಗುಂದ : ಶರಣ ಸಂಸ್ಕೃತಿಯ ಪಾವನ ತಾಣ ಮುಳಗುಂದದ ಬಾಲಲೀಲಾ ಮಹಾಂತ ಶಿವಯೋಗಿಗಳ ೧೬೫ನೇ ಸ್ಮರಣೋತ್ಸವದಂಗವಾಗಿ ಜರುಗುವ ಜಾತ್ರಾ ಮಹೋತ್ಸವ ಇದೇ ಫೆ. ೨೧ರಿಂದ ೨೩ರವರೆಗೆ ಗವಿಮಠಾಧ್ಯಕ್ಷರು, ಧಾರವಾಡ ಮುರುಘಾ ಮಠದ ಮನಿಪ್ರ ಮಲ್ಲಿಕಾರ್ಜುನ ಶ್ರೀಗಳ ನೇತೃತ್ವದಲ್ಲಿ ಜರುಗುವುದು.

Advertisement

ಫೆ. ೨೧ರಂದು ಬೆಳಗ್ಗೆ ೯ ಗಂಟೆಗೆ ಷಟ್‌ಸ್ಥಲ ಧ್ವಜಾರೋಹಣವನ್ನು ಅಗಡಿ ಗುತ್ತಲ ಪ್ರಭುಸ್ವಾಮಿ ಮಠದ ಗುರುಸಿದ್ಧ ಸ್ವಾಮಿಜಿ ನೆರವೇರಿಸುವರು. ಸಾನಿಧ್ಯವನ್ನು ಕಂಪ್ಲಿ ಕಲ್ಮಠದ ಅಭಿನವ ಪ್ರಭು ಸ್ವಾಮಿಜಿ, ಷಟ್‌ಸ್ಥಲ ನುಡಿಯನ್ನು ನೀಲಗುಂದ ಗುದ್ನೇಶ್ವರ ಮಠದ ಪ್ರಭುಲಿಂಗ ಶ್ರೀಗಳು ನೆರವೇರಿಸುವರು.

೨೧ರಂದು ಸಾಯಂಕಾಲ ೭ ಗಂಟೆಗೆ ಜಾತ್ರಾ ಮಹೋತ್ಸವ ಉದ್ಘಾಟನೆಯ ಸಾನ್ನಿಧ್ಯವನ್ನು ಮರಗೋಡು ದುರದುಂಡೇಶ್ವರ ಮಠದ ನೀಲಕಂಠ ಸ್ವಾಮಿಜಿ, ಸಮ್ಮುಖವನ್ನು ಗೋಕಾಕ ಶೂನ್ಯ ಸಂಪಾದನಾ ಪೀಠದ ಮುರುಘೇಂದ್ರ ಸ್ವಾಮಿಜಿ, ಉದ್ಘಾಟನೆಯನ್ನು ಹಂಪಿ ಕನ್ನಡ ವಿವಿಯ ಕುಲಪತಿ ಡಿ.ವ್ಹಿ. ಪರಶಿವಮೂರ್ತಿ, ಅಧ್ಯಕ್ಷತೆಯನ್ನು ಎಸ್.ಎಂ. ನೀಲಗುಂದ ವಹಿಸುವರು. ಅತಿಥಿಗಳಾಗಿ ಡಿ.ಆರ್. ಪಾಟೀಲ, ಗೌರಮ್ಮ ಬಡ್ನಿ ಭಾಗವಹಿಸುವರು.

`ಬೆಳೆಯುವ ಭೂವಿಯಲ್ಲೊಂದು ಪ್ರಳಯದ ಕಸಹುಟ್ಟಿ’ ವಿಷಯದ ಕುರಿತು ಗುರುಲಿಂಗ ದೇವರ ಮಠದ ಸಿದ್ಧಲಿಂಗ ಶ್ರೀಗಳು ಉಪನ್ಯಾಸ ನೀಡುವರು. ವಿಜಯಲಕ್ಷ್ಮಿ ಹಿರೇಮಠ, ಶ್ವೇತಾ ದೋಟಿಕಲ್ ಇವರಿಂದ ವಚನ ಸಂಗೀತ, ಹನಮಂತ ಭಜಂತ್ರಿ ಸಂಗಡಿಗರಿಂದ ಶಹನಾಯಿ, ಧಾತ್ರಿ ರಂಗ ಸಂಸ್ಥೆ ಕಲಾವಿದರು ಅಭಿನಯಿಸುವ ಪೌರಾಣಿಕ ಹಾಸ್ಯ ನಾಟಕ ಶ್ರೀಕೃಷ್ಣ ಸಂಧಾನ ಹಾಗೂ ಅಕ್ಕನಾಗಲಾಂಬಿಕೆ ಧಾರ್ಮಿಕ ನಾಟಕ ಜರುಗುವುದು.

ಫೆ. ೨೨ರಂದು ಮಧ್ಯಾಹ್ನ ೧ ಗಂಟೆಗೆ ಮಹಾದಾಸೋಹ, ಸಾಯಂಕಾಲ ೫ ಗಂಟೆಗೆ ಬಾಲಲೀಲಾ ಮಹಾಂತ ಶಿವಯೋಗಿಗಳ ರಥೋತ್ಸವ ನೆರವೇರುವುದು. ಸಾಯಂಕಾಲ ೭ ಗಂಟೆಗೆ ಅನುಭಾವಗೋಷ್ಠಿ-೨ರ ಸಾನ್ನಿಧ್ಯವನ್ನು ಹಾಲಕೆರೆ ಅನ್ನದಾನೀಶ್ವರ ಮಠದ ಮುಪ್ಪಿನ ಬಸವಲಿಂಗ ಸ್ವಾಮಿಜಿ, ಸಮ್ಮುಖವನ್ನು ಇಲಕಲ್ ಸಂಸ್ಥಾನಮಠದ ಗುರುಮಹಂತ ಸ್ವಾಮಿಜಿ, ಅತಿಥಿಗಳಾಗಿ ಎಸ್.ಎಸ್. ಪಾಟೀಲ, ರವಿ ಚನ್ನಣ್ಣವರ, ಮಹದೇವಪ್ಪ ಬಟ್ಟೂರ ಭಾಗವಹಿಸುವರು. ಡಾ. ಶಂಭುಲಿಂಗ ಹೆಗಡಾಳ ಇವರಿಂದ ಉಪನ್ಯಾಸ, ರೇವಣಸಿದ್ಧಯ್ಯ ಮರಿದೇವರಮಠ ಇವರಿಂದ ವಚನ ಸಂಗೀತ, ನಿಮಿಷಾಂಭಾ ಜೋತಿಶ್ರೀ ನಾಟ್ಯ ಅಕಾಡೆಮಿ ಇವರಿಂದ ಭರತನಾಟ್ಯ, ಬಿಗ್ ಬಾಸ್ ಹಾಗೂ ಕಾಮಿಡಿ ಕಿಲಾಡಿ ಖ್ಯಾತಿಯ ತುಕಾಲಿ ಸಂತು ಹಾಗೂ ತಂಡದವರಿಂದ ಮನರಂಜನಾ ಕಾರ್ಯಕ್ರಮಗಳು ಜರುಗುವವು.

ಫೆ.೨೩ರಂದು ಮಧ್ಯಾಹ್ನ ೧ ಗಂಟೆಗೆ ಮಹಾದಾಸೋಹ, ಸಾಯಂಕಾಲ ೫ ಗಂಟೆಗೆ ಮಲ್ಲಿಕಾರ್ಜುನ ಶ್ರೀಗಳಿಂದ ಕಡುಬಿನ ಕಾಳಗ ಜರುವುದು. ಸಾಯಂಕಾಲ ೭ ಗಂಟೆಗೆ ಅನುಭಾವಗೋಷ್ಠಿ-೩ರ ಸಾನ್ನಿಧ್ಯವನ್ನು ಗಂಗಾವತಿ ಕಲ್ಮಠದ ಕೋಟ್ಟೂರೇಶ್ವರ ಸ್ವಾಮಿಜಿ, ಸಮ್ಮುಖವನ್ನು ಸವಣೂರು ದೊಡ್ಡಹುಣಸೆ ಕಲ್ಮಠದ ಚನ್ನಬಸವ ಸ್ವಾಮಿಜಿ, ಗುರುವಂದನೆಯನ್ನು ಕುಂದಗೋಳ ಕಲ್ಯಾಣಪುರ ಮಠದ ಬಸವಣ್ಣಜ್ಜನವರು ನೆರವೇರಿಸುವರು. ಅತಿಥಿಗಳಾಗಿ ಬಸವರಾಜ ಬೋಮ್ಮನಹಳ್ಳಿ, ರಾಜು ಕುರಡಗಿ, ಕೃಷ್ಣಗೌಡ ಪಾಟೀಲ ಭಾಗವಹಿಸುವರು.
ಉಪನ್ಯಾಸವನ್ನು ಡಾ. ಶಿವಗಂಗಾ ರಂಜಣಗಿ, ವಚನ ಸಂಗೀತನ್ನು ಸಂಗಮೇಶ ಪಾಟೀಲ ನೆರವೇರಿಸುವರು ಹಾಗೂ ಅಪ್ಪಾಜಿ ಮೆಲೋಡಿಸ್ ಕುಡಗುಂಟಿ ತಂಡದವರಿಂದ ರಸಮಂಜರಿ ಕಾರ್ಯಕ್ರಮ ಜರುಗುವುದು ಎಂದು ಪ್ರಕಟಣೆ ತಿಳಿಸಿದೆ.


Spread the love

LEAVE A REPLY

Please enter your comment!
Please enter your name here