ವಿಜಯಸಾಕ್ಷಿ ಸುದ್ದಿ, ಮುಳಗುಂದ : ಜಾತ್ರೆಗಳು ನಮ್ಮಲ್ಲಿರುವ ಅಜ್ಞಾನವನ್ನು ಅಡಗಿಸಿ ಸುಜ್ಞಾನ ನೀಡುತ್ತವೆ ಎಂದು ಧಾರವಾಡ ಸಿಎಸ್ಐ ಕಾಲೇಜಿನ ಉಪನ್ಯಾಸಕ ಡಾ.ಶಂಭುಲಿಂಗ ಹೆಗಡಾಳ ಹೇಳಿದರು.
ಅವರು ಪಟ್ಟಣದ ಬಾಲಲೀಲಾ ಮಾಹಾಂತ ಶಿವಯೋಗಿಗಳ ೧೬೫ನೇ ಜಾತ್ರಾ ಮಹೋತ್ಸವದ ಅನುಭಾವ ಗೋಷ್ಠಿ-೩ ಕಾರ್ಯಕ್ರಮದಲ್ಲಿ ಮಾತನಾಡಿ, ಬಾಲಲೀಲಾ ಮಾಹಾಂತ ಶಿವಯೋಗಿಗಳು ತಮ್ಮ ಜೀವನವನ್ನು ಸಮಾಜದ ಉದ್ಧಾರಕ್ಕಾಗಿ ತ್ಯಾಗಿ ಜೀವಿಯಾಗಿ, ಕಾಯಕ ಯೋಗಿಗಳಾಗಿ ನಾಡಿನ ಜನತೆಗೆ ಆದರ್ಶಪ್ರಾಯರಾಗಿ ಬದುಕಿದವರು. ಅವರ ವಚನ ಸಾಹಿತ್ಯಗಳು ಇಂದಿಗೂ ಪ್ರಸ್ತುತವಾಗಿದ್ದು, ಪ್ರತಿಯೊಬ್ಬರೂ ಅವುಗಳನ್ನು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಸುಂದರವಾಗಿ ರೂಪುಗೊಳುತ್ತದೆ ಎಂದರು.
ಗವಿಮಠದ ಡಾ.ಮಲ್ಲಿಕಾರ್ಜುನ ಮಾಹಾಸ್ವಾಮಿಜಿ ಮಾತನಾಡಿ, ಬಾಲಲೀಲಾ ಮಾಹಾಂತ ಶಿವಯೋಗಿಗಳು ಕೈವಲ್ಯ ದರ್ಪಣ ಹರಿಕಾರರು. ಶಿವಯೋಗಿಗಳು ತಮ್ಮ ಬದುಕಿನುದ್ದಕ್ಕೂ ಸಮಾಜದ ಒಳಿತಿಗಾಗಿ ಬದುಕಿದವರು. ಯಾವ ಆಸೆ, ಆಮಿಷಗಳಿಗೆ ಒಳಗಾಗದೆ ಸಾರ್ಥಕ ಜೀವನ ಸಾಗಿಸಿದವರು ಎಂದರು.
ಕಲಬುರ್ಗಿಯ ಸಂಗಮೇಶ ಪಾಟೀಲ್ರಿಂದ ವಚನ ಸಂಗೀತ, ಕೊಪ್ಪಳದ ಅಪ್ಪಾಜಿ ಮೇಲೋಡಿಸ್ ಮೈಲಾರಿ ಕುಡಗುಂಟಿ ಅವರಿಂದ ರಸಮಂಜರಿ ಜರುಗಿತು.
ಸಮ್ಮುಖವನ್ನು ಸವಣೂರ ದೊಡ್ಡ ಹುಣಸೆಕಲ್ಮಠದ ಚನ್ನಬಸವ ಮಾಹಾಸ್ವಾಮೀಜಿ, ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗ ದೇವರು, ಗದಗ ಜಿಮ್ಸ್ ನಿರ್ದೇಶಕ ಬಸವರಾಜ ಬೊಮ್ಮನಹಳ್ಳಿ, ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರಡಗಿ, ಗದಗ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಗೌಡ ಪಾಟೀಲ್, ಜಾತ್ರಾ ಸಮಿತಿ ಅಧ್ಯಕ್ಷ ಬಸವರಾಜ ಬಾತಾಖಾನಿ, ಮಂಜುನಾಥ ಮಟ್ಟಿ, ಎಸ್.ಎಂ. ಉಜ್ಜಣ್ಣವರ ಇದ್ದರು.