ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತಾಲೂಕಿನ ಮಾಡಳ್ಳಿ ಗ್ರಾಮದ ಶ್ರೀ ಸಿದ್ಧಾರೂಡ ಮಠದಲ್ಲಿ ಶಿವನಾಮ ಸ್ಮರಣೆ ಸಪ್ತಾಹದ ಅಂಗವಾಗಿ ಮೇ.7ರಂದು ಬೆಳಿಗ್ಗೆಯಿಂದ ವಿಶೇಷ ಪೂಜೆ, ಪ್ರಸಾದ, ಸಂಜೆ ಉಪನ್ಯಾಸ, ಕೀರ್ತನೆ ನಡೆಯುವುದು. ಮೇ 8ರಂದು ಸಂಜೆ 5.30ಕ್ಕೆ ಶ್ರೀ ಸಿದ್ದಾರೂಢರ ಮಹಾರಥೋತ್ಸವ ನಡೆಯುವುದು.
ಮೇ.9ರಂದು ಕಡುಬಿನ ಕಾಳಗ ಹಾಗೂ ಕೌದಿ ಪಡೆಯೊಂದಿಗೆ ಮಂಗಲಗೊಳ್ಳುವದು.
ಅಣ್ಣಿಗೇರಿಯ ದಾಸೋಹಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಮತ್ತು ವರವಿ ಮೌನೇಶ್ವರದ ಮಠದ ಶ್ರೀ ವಿರುಪಾಕ್ಷೇಶ್ವರ ಸ್ವಾಮಿಗಳು ಸಾನ್ನಿಧ್ಯ ವಹಿಸುರು. ಸೂರಶೆಟ್ಟಿಕೊಪ್ಪ ಸಿದ್ದಾರೂಢಮಠದ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳು ಕೀರ್ತನಗೈಯುವರು. ಗುರುನಾಥ ಶಾಸ್ತ್ರಿಗಳು ಪ್ರವಚನ ಮಾಡುವರು.
ರಾಮಣ್ಣ ಮಾಸ್ತರ ಅಣ್ಣಿಗೇರಿ ಭಜನಾ ಸೇವೆ ಮಾಡುವರು. 3 ದಿನಗಳ ಕಾಲ ನಡೆಯುವ ಜಾತ್ರಾಮಹೋತ್ಸವ ಕಾರ್ಯಕ್ರಮದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮಾಡಳ್ಳಿಯ ಶ್ರೀ ಸಿದ್ದಾರೂಢ ಸ್ವಾಮಿ ಟ್ರಸ್ಟ್ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.