HomeGadag Newsಸಂವಿಧಾನದ ಉಳಿವಿಗಾಗಿ ಕಡ್ಡಾಯ ಮತದಾನವಾಗಲಿ

ಸಂವಿಧಾನದ ಉಳಿವಿಗಾಗಿ ಕಡ್ಡಾಯ ಮತದಾನವಾಗಲಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ವಿಶ್ವದಲ್ಲಿಯೇ ಶ್ರೇಷ್ಠ ಸಂವಿಧಾನವಾಗಿ ಗುರುತಿಕೊಂಡಿರುವ ಭಾರತದ ಸಂವಿಧಾನ ಸಧ್ಯ ಸಂಕಟ ಸಮಯದಲ್ಲಿದ್ದು, ಅದರ ಸಂರಕ್ಷಣೆ ನಮ್ಮಲ್ಲರ ಹೊಣೆ ಆಗಬೇಕು. ಸಂವಿಧಾನದ ಉಳಿವಿಗಾಗಿ ಎಲ್ಲರೂ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜಾಗೃತರಾಗಿ ತಮ್ಮ ಮತವನ್ನು ಕಡ್ಡಾಯವಾಗಿ ಚಲಾಯಿಸಬೇಂದು ಸ್ಲಂ ಜನಾಂದೋಲನ-ಕರ್ನಾಟಕ ರಾಜ್ಯ ಸಂಚಾಲಕ, ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ ಆರ್.ಮಾನ್ವಿ ಹೇಳಿದರು.

ಅವರು ಗದಗ-ಬೆಟಗೇರಿ ನಗರದ ಸ್ಲಂಗಳಲ್ಲಿ ಮತದಾನ ಜಾಗೃತಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಭಾರತದ ಎಲ್ಲಾ ನಾಗರಿಕರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು, ಚಿಂತನೆ, ಅಭಿವ್ಯಕ್ತಿ ನಂಬಿಕೆ ಮತ್ತು ಅವಕಾಶಗಳಲ್ಲಿ ಸಮಾನತೆಯನ್ನು ನಮ್ಮ ಸಂವಿಧಾನ ಖಾತರಿಪಡಿಸಿದೆ, ಎಲ್ಲರ ನಡುವೆ ಭ್ರಾತೃತ್ವವನ್ನು ಬೆಳಸುವುದೇ ಸಂವಿಧಾನದ ಮೂಲ ಆಶಯವಾಗಿದೆ ಎಂದರು.

ಸ್ಲಂ ಸಮಿತಿ ಪದಾಧಿಕಾರಿಗಳಾದ ರವಿಕುಮಾರ ಬೆಳಮಕರ, ಅಶೋಕ ಕುಸಬಿ, ಮೆಹರುನಿಸಾ ಢಾಲಾಯತ, ಇಬ್ರಾಹಿಮ ಮುಲ್ಲಾ, ಶಿವಾನಂದ ಶಿಗ್ಲಿ, ಸಾಕ್ರುಬಾಯಿ ಗೋಸಾವಿ, ಮೆಹಬೂಬಸಾಬ ಬಳ್ಳಾರಿ, ಬಾಷಾಸಾಬ ಡಂಬಳ, ದಾದು ಗೋಸಾವಿ, ಖಾಜಾಸಾಬ ಇಸ್ಮಾಯಿಲನವರ, ಶಿವಪ್ಪ ಲಕ್ಕುಂಡಿ, ಸಲೀಮ ಬೈರಕದಾರ, ಚಂದ್ರಿಕಾ ರೋಣದ, ಅಫ್ರೋಜಾ ಹುಬ್ಬಳ್ಳಿ, ಶೊಸೀಲಮ್ಮ ಗೊಂದರ, ಫೈರುಜಾ ಹುಬ್ಬಳ್ಳಿ, ಮೆಹರುನಿಸಾ ಡಂಬಳ, ತಿಪ್ಪಮ್ಮ ಕೊರವರ, ಕೌಸರ ಬೈರಕದಾರ, ವಿಶಾಲಕ್ಷಿ ಹಿರೇಗೌಡ್ರ, ನಗೀನಾ ಯಲಗಾರ, ಪೀರಮ್ಮ ನದಾಫ, ಜೈತುನಬಿ ಶಿರಹಟ್ಟಿ, ಲಕ್ಷ್ಮಿ ಮಣಿವಡ್ಡರ, ಶೋಭಾ ಹಿರೇಮಠ, ಮಕ್ತುಮಸಾಬ ಮುಲ್ಲಾನವರ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!