ಬೀದರ್:- ಡಿಫೆನ್ಸ್ ಸರ್ವಿಸ್ಸೆಸ್ ಹೆಸರಲ್ಲಿ ನಕಲಿ ವಿಸ್ಕಿ ತಯಾರಿಕೆ ಮಾಡುತ್ತಿದ್ದ ಘಟಕದ ಮೇಲೆ ಅಬಕಾರಿ ಪೊಲೀಸರು ದಾಳಿ ಮಾಡಿದ್ದಾರೆ.
ಬೀದರ್ ನಗರದ ಲೇಬರ್ ಕಾಲೋನಿಯ ಅಂಬಾದಾಸ್ ಮನೆಯಲ್ಲಿ ನಕಲಿ ವಿಸ್ಕಿ ತಯಾರಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಅಬಕಾರಿ ಪೊಲೀಸರು ದಾಳಿ ಮಾಡಿದ್ದಾರೆ. ದಾಳಿ ವೇಳೆ ಡಿಫೆನ್ಸ್ ಸರ್ವಿಸಸ್ ಎಂಬ ಹೆಸರಿನ 15 ಬಾಟಲ್ ವಶಕ್ಕೆ ಪಡೆಯಲಾಗಿದೆ.
20 ವಿವಿಧ ಬ್ರಾಂಡ್ ಗಳ ನೂರಕ್ಕು ಅಧಿಕ ಖಾಲಿ ಬಾಟಲ್ ಗಳನ್ನ ವಶಕ್ಕೆ ಪಡೆಯಲಾಗಿದೆ. ಬೀದರ್ ನಗರದ ಏರ್ ಫೋರ್ಸ್ ಕ್ಯಾಂಟಿನ್ ಇರೊ ಕಾರಣ ನಕಲಿ ವಿವಿಧ ಕಂಪನಿಗಳ ಲೇಬಲ್ ಬಳಸಿ ಆರೋಪಿಗಳು ವಿಸ್ಕಿ ಮಾರಾಟ ಮಾಡುತ್ತಿದ್ದರು.
ಬ್ಲಾಕ್ ಆಂಡ್ಯ್ ವೈಟ್, ಪೈಪರ್, ಓಲ್ಡ್ ಟ್ರಾವೆಲ್ಲರ್ ಸೇರಿದಂತೆ ಹಲವು ಬ್ರಾಂಡ್ ಗಳ ಹೆಸರಲ್ಲಿ ವಿಸ್ಕಿ ಮಾರಾಟ ಮಾಡುತ್ತಿದ್ದರು.
ಇದರ ಬಗ್ಗೆ ಖಚಿತ ಮಾಹಿತಿ ಪಡೆದ ಅಬಕಾರಿ ಡಿಸಿ ಎನ್ ಸಿ ಪಾಟೀಲ ಹಾಗು ಅಬಕಾರಿ ಡಿವೈಎಸ್ಪಿ ಆನಂದ ಉಕ್ಕಲಿ ನೇತ್ರತ್ವದ ತಂಡದಿಂದ ದಾಳಿ ನಡೆದಿದೆ. ಇನ್ನೂ ಆರೋಪಿಗಳ ವಿರುದ್ಧ ಭಾರತೀಯ ನಾಗರಿಕ ಸುರಕ್ಷಾ ಸಂಹಿತಿ 2023 ರ ಕಲಂ 35(3) ನೋಟಿಸ್ ಜಾರಿ ಮಾಡಿ ಪ್ರಕರಣ ದಾಖಲು ಮಾಡಲಾಗಿದೆ.