ಉತ್ತಮ ಅಂಕ ಪಡೆದು ಪಾಲಕರ ಹರ್ಷ ಹೆಚ್ಚಿಸಿದ ಮಲಿಕರೆಹಾನ್

0
sslc exam result
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿ ಮಾಡಬೇಕೆನ್ನುವ ಬಯಕೆಯಿಂದ ಶಿರಹಟ್ಟಿ ಪಟ್ಟಣದ ರಿಯಾಜಅಹ್ಮದ ಫಣಿಬಂದ ತಮ್ಮ ಮಗ ಮಲಿಕರೆಹಾನ್‌ಗೆ ಎಲ್‌ಕೆಜಿಯಿಂದ 10ನೇ ತರಗತಿವರೆಗೂ ಉತ್ತಮ ಶಿಕ್ಷಣವನ್ನು ಕಲ್ಪಿಸಿದ್ದರ ಫಲವಾಗಿ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 610 ಅಂಕಗಳನ್ನು ಪಡೆಯುವ ಮೂಲಕ ಶೇ.97.6ರಷ್ಟು ಸಾಧನೆಗೈದು, ತಂದೆ-ತಾಯಿಯ ಹರ್ಷವನ್ನು ಹೆಚ್ಚಿಸಿದ್ದಾನೆ.

Advertisement

ಶಿರಹಟ್ಟಿ ಪಟ್ಟಣದ ಮಧ್ಯಮವರ್ಗದ ಕುಟುಂಬವಾಗಿದ್ದರೂ ಸಹ ತಂದೆ-ತಾಯಿಯ ಸತತ ಪರಿಶ್ರಮದಿಂದ ಈ ಯಶಸ್ಸು ಲಭಿಸಿದೆ. ಮಗ ನಿತ್ಯವೂ ಶಾಲೆಯಲ್ಲಿ ಕೇಳಿದ ಪಾಠಗಳನ್ನು ತಾಯಿ ಯಾಸ್ಮೀನ್ ಪುನರಾವರ್ತನೆ ಮಾಡಿಸುವುದರ ಮೂಲಕ, ಮನೆಯಲ್ಲಿಯೂ ಅಧ್ಯಯನಕ್ಕೆ ಪೂರಕ ವಾತಾವರಣವನ್ನು ಕಲ್ಪಿಸಿದ್ದರ ಫಲವಾಗಿ ಕನ್ನಡ-125, ಇಂಗ್ಲೀಷ್-99, ಹಿಂದಿ-99, ಗಣಿತ-99, ವಿಜ್ಞಾನ-89, ಸಮಾಜ-99 ಹೀಗೆ 625ಕ್ಕೆ 610 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾನೆ.

ನಿವೃತ್ತ ಶಿಕ್ಷಕ ಕೆ.ಎ. ಬಳಿಗೇರ, ಸಿದ್ದು ಹಲಸೂರ ಹಾಗೂ ಸಹೋದರ ಸಾಹಿಲ್ ಇವರುಗಳೂ ಮಲಿಕರೆಹಾನ್ ಹೆಚ್ಚು ಅಂಕಗಳಿಸುವಲ್ಲಿ ಉತ್ತಮ ಮಾರ್ಗದರ್ಶನ ಮಾಡಿದ್ದಾರೆ. ಜೊತೆಗೆ ತಾನು ಕಲಿತ ಸಿಸಿಎನ್ ಆಂಗ್ಲ ಮಾಧ್ಯಮ ಶಾಲೆಯ ಕೀರ್ತಿಯನ್ನು ಸಹ ಹೆಚ್ಚಿಸಿದ್ದು, ಕೋಟಿ ರೂಪಾಯಿ ಗಳಿಸಿದರೂ ಸಿಗದ ಆತ್ಮತೃಪ್ತಿ ಮಗನ ಈ ಸಾಧನೆಯಿಂದ ಲಭಿಸಿದೆ ಎಂದು ತಂದೆ ರಿಯಾಜಅಹ್ಮದ ಫಣಿಬಂದ ತಮ್ಮ ಹರ್ಷವನ್ನು ವ್ಯಕ್ತಪಡಿಸಿ ಮಗನ ಸಾಧನೆಯನ್ನು ಕೊಂಡಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here