ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಹೆಸರು ಸೂಚನೆ: ಪ್ರಿಯಾಂಕ್ ಖರ್ಗೆ ಹೇಳಿದ್ದೇನು..?

0
Spread the love

ಕಲಬುರಗಿ :– I.N.D.I.A ಮೈತ್ರಿ ಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಹೆಸರು ಸೂಚನೆ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.  ಕಲಬುರಗಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಸದರನ್ನ ಆಯ್ಕೆ ಮಾಡಿ ಕಳುಹಿಸಬೇಕಾಗಿದೆ. ಅದು ನಮ್ಮ ಮೂಲ ಉದ್ದೇಶ ಆಗಿದೆ , ಅದು ಬಿಟ್ಟರೆ ಬೇರೆ ಏನಿಲ್ಲ.

Advertisement

ಕಾಂಗ್ರೆಸ್ ಸ್ವಂತ ಬಲದ ಮೇಲೆ 200 ರಿಂದ 250 ಸಂಸದರನ್ನ ಗೆಲ್ಲಬೇಕು. ಅದರ ಜೊತೆ ಜೊತೆಗೆ ಮೈತ್ರಿ ಪಕ್ಷದ ಸಂಸದರನ್ನು ಆಯ್ಕೆ ಮಾಡಿ ಸಂಸತ್ತಿಗೆ ಕಳುಹಿಸಬೇಕು ಎಂದರು. ಇನ್ನೂ ಖರ್ಗೆಯವರನ್ನ ದಲಿತ ನಾಯಕ ಅನ್ನೋ ಕಾರಣಕ್ಕೆ ಒಂದು ಸಮುದಾಯಕ್ಕೆ ಲೇಪಿಸ್ತಿರಾ!?ಸಿಎಂ ವಿಚಾರ ಬಂದ್ರು ಪಿಎಂ ವಿಚಾರ ಬಂದ್ರು ಅದನ್ನೆ ಲೇಪಿಸ್ತಿರಾ!? ಖರ್ಗಯೆವರು ಸಮರ್ಥರಲ್ಲವಾ ಎಂದು ಪ್ರಶ್ನಿಸಿದರು.


Spread the love

LEAVE A REPLY

Please enter your comment!
Please enter your name here