ಬೆಂಗಳೂರು: ಬೆಂಗಳೂರಿನಲ್ಲಿ ಬಿಯರ್ ಬಾಟಲಿನಿಂದ ಹೊಡೆದು ವ್ಯಕ್ತಿಯ ಕೊಲೆ ಮಾಡಿರುವ ಘಟನೆ ನಡೆದಿದೆ. ತ್ಯಾಗರಾಜನಗರ ನಿವಾಸಿ ಸುರೇಶ್ (45) ಕೊಲೆಯಾದ ವ್ಯಕ್ತಿಯಾಗಿದ್ದು, ವೇಲು ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಸುರೇಶ್ ತನ್ನ ಸ್ನೇಹಿತ ವೇಲು ಹಾಗೂ ಇತರರೊಂದಿಗೆ ರಾತ್ರಿ ವೇಳೆ ಡ್ರಿಂಕ್ಸ್ ಪಾರ್ಟಿ ಮಾಡಲು ಹೋಗಿದ್ದರು.
Advertisement
ಅವರು ಎಂಆರ್ ಪಿಯಲ್ಲಿ ಮೊದಲು ಕುಡಿಯಲು ಮದ್ಯದ ಬಾಟಲಿಗಳನ್ನು ಖರೀದಿಸಿದ್ದಾರೆ. ನಂತರ ಆಟೋದಲ್ಲಿ ಕುಳಿತುಕೊಂಡು ಕುಡಿದುಕೊಂಡೇ ಸುತ್ತಾಡುತ್ತಿದ್ದರು. ಈ ಸಮಯದಲ್ಲಿ ವೇಲು ಮತ್ತು ಸುರೇಶ್ ನಡುವೆ ಕ್ಷುಲಕ ವಿಷಯಕ್ಕೆ ಜಗಳವಾಯಿತು.
ಜಗಳ ಹೆಚ್ಚಾಗುತ್ತಾ ಹೋದಂತೆ, ವೇಲು ಕೋಪದಿಂದ ಬಿಯರ್ ಬಾಟಲ್ ಎತ್ತಿಕೊಂಡು ಸುರೇಶ್ ತಲೆಯ ಮೇಲೆ ಜೋರಾಗಿ ಹೊಡೆದಿದ್ದಾನೆ. ಈ ಹಲ್ಲೆಯಿಂದ ಸುರೇಶ್ ತೀವ್ರವಾಗಿ ಗಾಯಗೊಂಡಿದ್ದು ಮೃತಪಟ್ಟಿದ್ದಾರೆ.
ನಂತರ ವಿಚಾರ ತಿಳಿದು ಪೊಲೀಸರು ದೂರು ದಾಖಲಿಸಿಕೊಂಡು ತ್ವರಿತ ಕ್ರಮ ಕೈಗೊಂಡರು. ಆರೋಪಿ ವೇಲು ಎಂಬಾತನನ್ನು ಸ್ಥಳದಿಂದಲೇ ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


