ಕೋಲಾರ: ರೈಲ್ವೆ ಹಳಿ ಬಳಿ ಕಂಬಕ್ಕೆ ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಹಮತ್ ನಗರದ ರೈಲ್ವೆ ಬ್ರಿಡ್ಜ್ ಹಳಿಗಳ ಬಳಿ ನಡೆದಿದೆ. ಉತ್ತರ ಪ್ರದೇಶ ಮೂಲದ ರಾಜೇಂದ್ರ 26 ಮೃತ ಯುವಕನಾಗಿದ್ದು, ಲಾರಿಯಲ್ಲಿ ಕ್ಲೀನರ್ ಆಗಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದನೆಂದು ತಿಳಿದು ಬಂದಿದೆ.
Advertisement
ಈ ಘಟನೆ ಆತ್ಮಹತ್ಯೆಯೋ ಅಥವಾ ಕೊಲೆ ಮಾದರಿಯ ಸಂಶಯಾಸ್ಪದ ಸಾವೋ ಎಂಬ ಪ್ರಶ್ನೆ ಪೊಲೀಸರ ಮುಂದೆ ನಿಂತಿದೆ. ಮಾಹಿತಿ ಪಡೆದ ಬಂಗಾರಪೇಟೆ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.


