ಬಳ್ಳಾರಿ:- ಹಳೆ ದ್ವೇಷ ಹಿನ್ನೆಲೆ ವ್ಯಕ್ತಿ ಕೊಲೆ ಎಸ್ಕೇಪ್ ಆಗಿದ್ದ ರೌಡಿಶೀಟರ್ ಕಾಲಿಗೆ ಪೊಲೀಸರು ಫೈರಿಂಗ್ ಮಾಡಿರುವ ಘಟನೆ ಇಲ್ಲಿನ ಹೊಸಪೇಟೆಯಲ್ಲಿ ಜರುಗಿದೆ.
Advertisement
ಗುಂಡೇಟು ತಿಂದ ಆರೋಪಿಯನ್ನು 30 ವರ್ಷದ ಹುಚ್ಚಕಾಳಿ ಎಂದು ಗುರುತಿಸಲಾಗಿದೆ. ಹುಚ್ಚಕಾಳಿ, ಬುಧವಾರ ರಾತ್ರಿ ಅಂದ್ರೆ ನಿನ್ನೆ ಹೊನ್ನೂರಸ್ವಾಮಿ ಎಂಬವರ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದ. ಹಳೆ ದ್ವೇಷ ಹಿನ್ನೆಲೆ ಹತ್ಯೆ ಮಾಡಿ, ಆರೋಪಿ ತಲೆಮರೆಸಿಕೊಂಡಿದ್ದ.
ಆರೋಪಿಯನ್ನು ಬಂಧಿಸಿ, ಕೊಲೆಗೆ ಬಳಸಿದ್ದ ಚಾಕು ವಶಕ್ಕೆ ಪಡೆಯುವ ವೇಳೆ, ಆತ ಪೊಲೀಸರ ಮೇಲೆ ದಾಳಿಗೆ ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಆತ್ಮ ರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಆರೋಪಿಗೆ ಹಾಗೂ ದಾಳಿಯಿಂದ ಗಾಯಗೊಂಡ ಪೊಲೀಸ್ ಸಿಬ್ಬಂದಿಗೆ ಹೊಸಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.