ಬಿಗ್ ಬಾಸ್ 8ರ ವಿನ್ನರ್ ಮಂಜು ಪಾವಗಡ ಅವರ ಬಾಳಲ್ಲಿ ಹುಡುಗಿಯ ಆಗಮನ ಆಗಿದೆ. ಮಂಜು ಹಾಗೂ ಆ ಹುಡುಗಿಯ ನಿಶ್ಚಿತಾರ್ಥ ಕೂಡ ನೆರವೇರಿದೆ.
ಸೈಲೆಂಟ್ ಆಗಿ ಈ ಕಾರ್ಯಗಳು ನೆರವೇರಿವೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ಸಾಕಷ್ಟು ವೈರಲ್ ಆಗಿದೆ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ.
ನಟ ಮಂಜು ಪಾವಗಡ ಅವರು ನಂದಿನಿ ಎಂಬುವವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಅದರ ಪೂರ್ವಭಾವಿಯಾಗಿ ಈಗ ಎಂಗೇಜ್‌ಮೆಂಟ್ ನಡೆದಿದೆ. ನಂದಿನಿ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಗುರು-ಹಿರಿಯರು ಒಪ್ಪಿಗೆ ಮೇರೆಗೆ ಈ ಮದುವೆ ಮಾತುಕತೆ ನಡೆದಿದೆಯಂತೆ. ಸದ್ಯ ಮಂಜು ಪಾವಗಡ ಮತ್ತು ನಂದಿನಿ ಅವರ ನಿಶ್ಚಿತಾರ್ಥ ಸಮಾರಂಭ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು, ಆಪ್ತರು, ಹಿತೈಷಿಗಳು ಶುಭ ಹಾರೈಸಿದ್ದಾರೆ.
ಮಂಜು ಪಾವಗಡ ಮತ್ತು ನಂದಿನಿ ಅವರ ಮದುವೆಯು ಪಾವಗಡದಲ್ಲಿ ನಡೆಯಲಿದೆ. ನವೆಂಬರ್ 13 ಮತ್ತು 14ರಂದು ಈ ಕಲ್ಯಾಣ ಜರುಗಲಿದೆ ಎಂದು ಆಪ್ತಮೂಲಗಳು ಮಾಹಿತಿ ಹಂಚಿಕೊಂಡಿವೆ. ಈಚೆಗಷ್ಟೇ ಬೆಂಗಳೂರಿನಲ್ಲಿ ಹೊಸ ಮನೆಯೊಂದರ ಗೃಹಪ್ರವೇಶವನ್ನು ಮಂಜು ಮಾಡಿದ್ದರು. ಇದೀಗ ಮತ್ತೊಂದು ಶುಭ ಸುದ್ದಿ ಅವರ ಕಡೆಯಿಂದ ಸಿಕ್ಕಿದೆ.