HomeGadag Newsಸಂಗೊಳ್ಳಿ ರಾಯಣ್ಣರ ತ್ಯಾಗ ವ್ಯರ್ಥವಾಗಿಲ್ಲ : ಎ.ಡಿ. ಕೋಲಕಾರ

ಸಂಗೊಳ್ಳಿ ರಾಯಣ್ಣರ ತ್ಯಾಗ ವ್ಯರ್ಥವಾಗಿಲ್ಲ : ಎ.ಡಿ. ಕೋಲಕಾರ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ದೇಶಕ್ಕಾಗಿ ತನ್ನ ಕೊರಳನ್ನು ಗಲ್ಲುಗಂಬಕ್ಕೊಡ್ಡಿದ ಅಪ್ಪಟ ಕನ್ನಡದ ಹುಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ತ್ಯಾಗ ವ್ಯರ್ಥವಾಗಲಿಲ್ಲ ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ಅಲ್ಪಸಂಖ್ಯಾತ ಕಾರ್ಯದರ್ಶಿ ಎ.ಡಿ. ಕೋಲಕಾರ ಹೇಳಿದರು.

ಪಟ್ಟಣದ ಗೌಳಿಗಲ್ಲಿಯ ಗರಡಿಮನೆ ಮುಂಭಾಗದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನದಿಂದ ಹುತಾತ್ಮ ಸಂಗೊಳ್ಳಿ ರಾಯಣ್ಣ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಾಡು-ನುಡಿಯ ರಕ್ಷಣೆಗಾಗಿ ಪ್ರಾಣತೆತ್ತ ಮಹನೀಯರಲ್ಲಿ ರಾಯಣ್ಣ ಅಗ್ರಗಣ್ಯ ಸ್ಥಾನವನ್ನು ಅಲಂಕರಿಸುತ್ತಾರೆ. ತಾಯಿ ಚನ್ನವ್ವನಿಗಾಗಿ ಹಾಗೂ ಕಿತ್ತೂರಿಗಾಗಿ ಅವಿರತ ಹೋರಾಟ ನಡೆಸಿದ ರಾಯಣ್ಣ ಇಂದಿನ ಯುವಸಮೂಹಕ್ಕೆ ಮಾದರಿಯಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಪ್ರತಿಷ್ಠಾನ ಅಧ್ಯಕ್ಷ ಹೆಚ್.ಎಸ್. ಸೋಂಪೂರ, ಪುರಸಭೆ ಸದಸ್ಯ ರಾಜು ಸಾಂಗ್ಲಿಕರ, ಬಸವರಾಜ ವದೆಗೋಳ, ಶರಣಪ್ಪ ಕಂಬಳಿ, ಶರಣಪ್ಪ ಜೂಲಗುಡ್ಡ, ಅಶೋಕ ವದೇಗೋಳ, ನಿಂಗಪ್ಪ ಮಾಸ್ತಿ, ಗುಲಾಮನಭಿ ಹುನಗುಂದ, ಸಂಗಪ್ಪ ವದೇಗೋಳ, ಶಿವಪ್ಪ ತುಮ್ಮರಗುದ್ದಿ, ಮುರ್ತುಜಾ ವಂಟಿ, ತಿಪ್ಪಣ್ಣ ವದೇಗೋಳ, ನಿಂಗಪ್ಪ ಸೋಂಪೂರ, ಮಹಮ್ಮದ್ ನಾಲಬಂಧ, ಜಗದೀಶ ಹೊಸಳ್ಳಿ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!