ತತ್ವಾದರ್ಶಗಳನ್ನು ಆಚರಿಸುವ ಹಬ್ಬ ಬಕ್ರೀದ್ : ಖಾದರಸಾಬ ಮುಲ್ಲಾ

0
Mass prayer at the Eidgah Maidan of Dambala village
Spread the love

ವಿಜಯಸಾಕ್ಷಿ ಸುದ್ದಿ, ಡಂಬಳ : ಬಕ್ರೀದ್ ತ್ಯಾಗ, ಬಲಿದಾನಗಳ ಸಂಕೇತವಾಗಿದೆ. ತ್ಯಾಗ, ಸಹನೆ ಮತ್ತು ಪರಿಶ್ರಮವೆಂಬ ಮೂರು ಉನ್ನತ ತತ್ವಾದರ್ಶಗಳನ್ನು ಬಕ್ರೀದಿನ ಇತಿಹಾಸ ವಿಶ್ವದ ಜನತೆಗೆ ಸಾರುತ್ತದೆ. ಪರರ ಒಳಿತಿಗಾಗಿ ತ್ಯಾಗ, ಕಷ್ಟಗಳ ಮುಂದೆ ಸಹನೆ ಮತ್ತು ಸಾಮಾಜಿಕ ಹಿತಾಸಕ್ತಿಗಾಗಿ ಪರಿಶ್ರಮ ಎಂಬ ಉದಾತ್ತ ಆದರ್ಶಗಳೊಂದಿಗೆ ಇಂದು ಬಕ್ರೀದನ್ನು ಮುಸ್ಲಿಮರು ವಿಶ್ವದಾದ್ಯಂತ ಆಚರಿಸುತ್ತಾರೆ ಎಂದು ಧರ್ಮಗುರು ಖಾದರಸಾಬ ಮುಲ್ಲಾ ಹೇಳಿದರು.

Advertisement

ಡಂಬಳ ಗ್ರಾಮದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮಾಜದವರು ಈದ್-ಉಲ್-ಅಧಾವನ್ನು ಅರಾಫತ್ ದಿನವಾದ ಹಜ್‌ನ ಮುಖ್ಯ ಆಚರಣೆಯ ಪ್ರತೀಕ ಆಚರಿಸಲಾಗುವ ಹಬ್ಬವನ್ನು ಸಾಮೂಹಿಕ ಪ್ರಾರ್ಥನೆಯ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.

ಒಂದು ದಿನ ಇಬ್ರಾಹಿಂ ಅವರ ಕನಸಿನಲ್ಲಿ ಬಂದ ಅಲ್ಲಾಹು ನಿನಗೆ ಅಮೂಲ್ಯ ಎನಿಸುವುದನ್ನು ನನಗೆ ಸಮರ್ಪಿಸು ಎಂದು ಆದೇಶಿಸುತ್ತಾರೆ. ಹೀಗಾಗಿ ತಮಗೆ ಅಮೂಲ್ಯವಾಗಿರುವ ಹಾಗೂ ಏಕೈಕ ಪುತ್ರ ಇಸ್ಮಾಯಿಲ್ ಅವರನ್ನು ಬಲಿ ನೀಡಲು ಇಬ್ರಾಹಿಂ ನಿರ್ಧರಿಸುತ್ತಾರೆ. ಇಸ್ಮಾಯಿಲ್ ಕತ್ತಿನ ಮೇಲೆ ಎಷ್ಟೇ ಸಲ ಕತ್ತಿ ಚಲಾಯಿಸಿದರೂ ಅದು ಹರಿಯುವುದಿಲ್ಲ. ಪುತ್ರ ವಾತ್ಸಲ್ಯದಿಂದ ಹೀಗಾಗುತ್ತಿದೆ ಎಂದುಕೊಂಡ ಇಬ್ರಾಹಿಂ ಅವರು ತಮ್ಮ ಕಣ್ಣುಗಳಿಗೆ ಬಟ್ಟೆ ಕಟ್ಟಿಕೊಂಡು ಕತ್ತಿ ಪ್ರಯೋಗಿಸುತ್ತಾರೆ. ಅಷ್ಟೊತ್ತಿಗೆ ಆತನ ಪರೀಕ್ಷೆ ನಿಲ್ಲಿಸಿದ್ದ ಅಲ್ಲಾಹು ಜಿಬ್ರಾಯಿಲ್‌ನನ್ನು ಕಳುಹಿಸಿರುತ್ತಾನೆ. ಜಿಬ್ರಾಯಿಲ್ ಅವರು ಬಂದು ಇಸ್ಮಾಯಿಲ್ ಅವರ ಜಾಗದಲ್ಲಿ ಕುರಿಯೊಂದನ್ನು ಇಟ್ಟಿರುತ್ತಾರೆ. ಇಬ್ರಾಹಿಂ ಕಣ್ತೆರೆದಾಗ ಅಲ್ಲಿ ಕುರಿಯ ಬಲಿ ನಡೆದಿತ್ತು. ಅಲ್ಲಾಹು ಒಡ್ಡಿದ ಸತ್ವ ಪರೀಕ್ಷೆಯನ್ನು ಇಬ್ರಾಹಿಂ ಗೆದ್ದಿದ್ದರು. ಅಂದಿನಿಂದ ಬಲಿ ಕರ್ಮ ಇಸ್ಲಾಮಿನ ಭಾಗವಾಗಿದ್ದು ಬಕ್ರೀದ್ ದಿನ ಪ್ರಾಣಿ ಬಲಿ ನೀಡಲಾಗುತ್ತಿದೆ ಎಂದು ಬಕ್ರೀದ್ ಆಚರಣೆಯ ಹಿನ್ನೆಲೆಯ ಕುರಿತು ಹೇಳಿದರು.

ಪ್ರಾರ್ಥನೆಯಲ್ಲಿ ಅಂಜುಮನ ಅಧ್ಯಕ್ಷ ಬಶೀರಹಮ್ಮದ ತಾಂಬೋಟಿ, ಖಾಜಾಹುಸೇನ ಹೋಸಪೇಟಿ, ಮೋಹದ್ದಿನ ಅಳವುಂಡಿ, ಅಲ್ಲಿಸಾಬ ಸರಕಾವಾಸ, ಹುಸೇನಸಾಬ ಮೂಲಿಮನಿ, ನೂರಹಮ್ಮದ ಸರಕಾವಾಸ, ಬುಡ್ನೆಸಾಬ ಜಲಾಲನವರ, ಬಾಬುಸಾಬ ಸರಕಾವಾಸ, ಜಾಕೀರ ಮೂಲಿಮನಿ, ಅಲ್ಲಾವುದ್ದೀನ್ ಹೊಂಬಳ, ಮಹಮ್ಮದರಫೀಕಸಾಬ ಹೋಸಪೇಟಿ, ಹುಸೇನಸಾಬ ಹೊಸಬಾವಿ, ರಜಾಕಸಾಬ ದೊಡ್ಡಮನಿ, ಪೀರಸಾಬ ಮಕಾಂದಾರ, ಬುಡ್ನೆಸಾಬ ಅತ್ತಾರ, ರಾಯಸಾಬ ಕಾಸ್ತಾರ, ಇಬ್ರಾಹಿಂಸಾಬ ಸರಕಾವಾಸ, ರಜಾಕಸಾಬ ತಾಂಬೋಟಿ, ರಫೀಕ ಮನಿಯಾರ, ಚಾಂದಸಾಬ ಮಿರ್ಜಾನವರ, ಬಾಬುಸಾಬ ಸರಕಾವಾಸ, ಎಮ್.ಆರ್. ಆಲೂರ, ಇಬ್ರಾಹಿಂ ಹೊಸಪೇಟಿ ಮುಂತಾದವರಿದ್ದರು.

ಪ್ರವಾದಿ ಇಬ್ರಾಹಿಂ ಅವರು ಅಲ್ಲಾಹುವಿನ ಆಪ್ತರು. ಅಲ್ಲಾಹು ಒಡ್ಡಿದ ಹಲವು ಬಗೆಯ ಪರೀಕ್ಷೆಗಳಲ್ಲಿ ಜಯಿಸಿದವರು. ಅಲ್ಲಾಹುವಿನ ಇಚ್ಛೆಯಂತೆ ಎಲ್ಲ ಪ್ರೀತಿಯ ವಸ್ತುಗಳನ್ನು ತ್ಯಾಗ ಮಾಡಿದವರು ಎಂದು ನಂಬಲಾಗುತ್ತದೆ ಎಂದು ಧರ್ಮಗುರು ಖಾದರಸಾಬ ಮುಲ್ಲಾ ಹೇಳಿದರು.


Spread the love

LEAVE A REPLY

Please enter your comment!
Please enter your name here