ವಿಜಯಸಾಕ್ಷಿ ಸುದ್ದಿ, ಮುಳಗುಂದ : ತ್ಯಾಗ, ಬಲಿದಾನದ ಸಂಕೇತ ಬಕ್ರೀದ್ ಹಬ್ಬವಾಗಿದೆ ಎಂದು ಮುಸ್ಲಿಂ ಧರ್ಮಗುರು ಇಸ್ಮಾಯಿಲ್ ಖಾಜಿ ಹೇಳಿದರು.
ಅವರು ಪಟ್ಟಣದ ಈದ್ಗಾ ಮೈದಾನದಲ್ಲಿ ಸೋಮವಾರ ಬಕ್ರೀದ್ ಹಬ್ಬದ ನಿಮಿತ್ತ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ನಂತರ ಮಾತನಾಡಿ, ಬಕ್ರೀದ್ ಹಬ್ಬವು ತ್ಯಾಗ, ಬಲಿದಾನದ ಸಂಕೇತವಾಗಿದ್ದು, ನಾವೆಲ್ಲರೂ ಸಹೋದರರಂತೆ ಬಾಳಬೇಕು. ನಮ್ಮ ಕಾಯಕದಲ್ಲಿನ ಸ್ವಲ್ಪವನ್ನಾದರೂ ದಾನ, ಧರ್ಮ ಮಾಡಬೇಕು.
ನಾವೆಲ್ಲರೂ ಶಾಂತಿ-ಸೌಹಾರ್ದತೆಯಿಂದ ಬಾಳಬೇಕು. ಬಡವರು, ದೀನ-ದಲಿತರು ಎಲ್ಲರನ್ನು ನಮ್ಮ ಸಹೋದರ-ಸಹೋದರಿಯರಂತೆ ಕಾಣಬೇಕು. ಮುಸ್ಲಿಂ ಬಾಂಧವರಿಗೆ ಈ ಹಬ್ಬವು ಪವಿತ್ರವಾದದ್ದು ಎಂದರು.
ಪಟ್ಟಣದ ಈದ್ಗಾ ಮೈದಾನದಲ್ಲಿ ವೃದ್ದರಿಂದ ಹಿಡಿದು ಚಿಕ್ಕಮಕ್ಕಳು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು. ಇಮಾಮಸಾಬ ಖವಾಸ, ಬಾಬುಸಾಬ ಖಲೀಪನವರ, ಎಚ್.ಎಂ. ನದ್ದಿಮುಲ್ಲಾ, ಹೈದರಲಿ ಖವಾಸ, ರಾಜೇಸಾಬ ಸೈಯದಬಡೆ, ತಾಜುದ್ದಿನ್ ಕಿಂಡ್ರಿ, ಇಮಾಮಸಾಬ ಶೇಖ, ಸೈಯದಲಿ ಶೇಖ, ಎಂ.ಎಂ. ಹುಬ್ಬಳ್ಳಿ, ಖಲಂದರ ಗಾಡಿ, ದಾದಾಖಲಂದರ ಹೊಂಬಳ, ಮೌಲಾಸಾಬ ಸದರಭಾವಿ, ಇಬ್ರಾಹಿಂಸಾಬ ಹಣಗಿ, ಮುನ್ನಾ ಡಾಲಾಯತ, ದಾವುದ ಜಮಾಲ, ಜಮನಸಾಬ ಹಾದಿಮನಿ, ಎ.ಡಿ. ಮುಜಾವಾರ,ಡಿ.ಡಿ. ಮುಜಾವಾರ, ಮಹ್ಮದ್ ಭಾವಿಕಟ್ಟಿ, ಆಸ್ಪಾಕ್ ಕಮಲ್ಲಣ್ಣವರ ಇದ್ದರು.