ವಿಜಯಸಾಕ್ಷಿ ಸುದ್ದಿ, ರೋಣ : ಮುಸ್ಲಿಂರು ಸಹೋದರತೆ ಹಾಗೂ ಸೌಹಾರ್ದತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮೌಲಾನ ಮಲೀಕ್ ಹೇಳಿದರು.
ಅವರು ಸೋಮವಾರ ಮಾರನಬಸರಿ ಗ್ರಾಮದ ಈದ್ಗಾ ಮೈದಾನದಲ್ಲಿ ಜರುಗಿದ ಬಕ್ರೀದ್ ಹಬ್ಬದ ಸಾಮೂಹಿಕ ಪ್ರಾರ್ಥನೆಯ ನೇತೃತ್ವ ವಹಿಸಿ ಮಾತನಾಡಿದರು.
ಇಸ್ಲಾಂ ಧರ್ಮವು ಶಾಂತಿ ಮತ್ತು ಸಹೋದರತೆಯನ್ನು ಪ್ರತಿಪಾದಿಸುತ್ತದೆ ಎಂಬ ಸತ್ಯವನ್ನು ನಾವು ಮೊದಲು ಅರಿತುಕೊಳ್ಳಬೇಕು. ನಮ್ಮಲ್ಲಿ ಅಡಕವಾಗಿರುವ ಕೆಟ್ಟ ಆಲೋಚನೆಗಳಿಂದ ಹೊರ ಬಂದು ಸಮಾಜದ ಹಾಗೂ ಸಮುದಾಯದ ಒಳಿತಿಗಾಗಿ ಶ್ರಮಿಸಬೇಕು. ಮುಸ್ಲಿಂರಿಗೆ ಬಕ್ರೀದ್ ಹಬ್ಬವು ಅತ್ಯಂತ ಪವಿತ್ರವಾಗಿದ್ದು, ನಾವು ದುಶ್ಚಟಗಳಿಂದ ವಿಮುಕ್ತರಾಬೇಕಿದೆ. ನಮ್ಮ ಬದುಕು ಧರ್ಮದ ತಳಹದಿಯಲ್ಲಿ ಸಾಗಬೇಕಿದ್ದು, ಮುಸ್ಲಿಂರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಜೊತೆಗೆ ದಿನಕ್ಕೆ ಐದು ಬಾರಿ ಪ್ರಾರ್ಥನೆ ಕೂಡ ಸಲ್ಲಿಸಬೇಕು. ಇದರಿಂದ ಮನಸ್ಸಿಗೆ ನೆಮ್ಮದಿ ದೊರಕುತ್ತದೆ ಎಂದರು.
ಇದ್ಕಕೂ ಮೊದಲು ಜುಮ್ಮಾ ಮಸೀದಿಯಿಂದ ದೇವರ ನಾಮ ಸ್ಮರಣೆ ಮಾಡುತ್ತಾ ಪ್ರಮುಖ ಬಿದಿಗಳಲ್ಲಿ ಸಂಚರಿಸಿ ಹೊರವಲಯದಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿದರು. ಪ್ರಾರ್ಥನೆಯ ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಕಾಶೀಮಸಾಬ ದೋಟಿಹಾಳ, ರೈಮಾನಸಾಬ ಮೋತೆಖಾನ್, ಬಾಬು ಅತ್ತಾರ, ಮೌಲಾಸಾಬ ಸವಡಿ, ಪಕ್ರುಸಾಬ ಹಜರತನವರ, ಬಾಬು ಮೋತೆಖಾನ್, ಅಲ್ಲಿಸಾಬ ಸವಡಿ, ಖಾಧಿರಸಾಬ ಕಳಕಾಪೂರ, ನಭಿಸಾಬ ಹುಡೇದ, ರಿಯಾಜ ಆಲೂರ, ಅಲ್ಲಾಸಾಬ ಮೋತೆಖಾನ್, ಹುಸೇನಸಾಬ ಹುಡೇದ, ದಸ್ತಗೀರಸಾಬ ದೋಟಿಹಾಳ ಸೇರಿದಂತೆ ನೂರಾರು ಮುಸ್ಲಿಂರು ಪಾಲ್ಗೊಂಡಿದ್ದರು.