ಗದಗ:- ಕಾನೂನು ಸಚಿವ ಎಚ್ ಕೆ ಪಾಟೀಲರಿಗೆ ಮುಖ್ಯಮಂತ್ರಿ ಯೋಗ ಕೂಡಿ ಬರಲಿ ಎಂದು ಚಿತ್ರದುರ್ಗ ಭೂವಿ ಗುರುಪೀಠ ಸಂಸ್ಥಾನ ಮಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಆಶೀರ್ವಾದ ಮಾಡಿದ್ದಾರೆ.
Advertisement
ಗದಗನಲ್ಲಿ ನಡೆದ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಸ್ವಾಗತ ಕೋರುವ ವೇಳೆ ಸಚಿವ ಎಚ್ ಕೆ ಪಾಟೀಲರಿಗೆ ಸಿಎಂ ಯೋಗ ಇತ್ತು ಎಂದು ಸ್ವಾಮೀಜಿ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಸ್ವಾಮೀಜಿ, ಎಚ್ ಕೆ ಪಾಟೀಲರು ಎರಡು ಮೂರು ಬಾರಿ ಸಿಎಂ ಆಗಿರುತ್ತಿದ್ದರು. ಎಸ್ ಎಂ ಕೃಷ್ಣ ಆದ್ಮೇಲೆ ಸಿಎಂಗಾಗಿ ಹೆಸರು ಓಡಿದ್ದು ಎಚ್ ಕೆ ಪಾಟೀಲರದ್ದೇ, ತಡವಾಗಿಯಾದ್ರೂ ಎಚ್ ಕೆ ಪಾಟೀಲರಿಗೆ ಸಿಎಂ ಯೋಗ ಕೂಡಿ ಬರಲಿ ಎಂದು ಸ್ವಾಮೀಜಿ ಹಾರೈಸಿದರು.
ಇತ್ತೀಚಿನ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಅಧಿಕಾರ ಹಂಚಿಕೆ ಚರ್ಚೆ ಜೋರಾಗಿ ನಡೆಯುತ್ತಿದ್ದು, ಇದರ ಮಧ್ಯೆಯೇ ಎಚ್ ಕೆ ಪಾಟೀಲರ ಹೆಸರನ್ನು ಸ್ವಾಮೀಜಿ ಹರಿಬಿಟ್ಟಿದ್ದಾರೆ.