HomeEducationಕಲಿತ ಶಾಲೆ, ಗುರುಗಳ ಸ್ಮರಣೆಯಿರಲಿ

ಕಲಿತ ಶಾಲೆ, ಗುರುಗಳ ಸ್ಮರಣೆಯಿರಲಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಕಲಿತ ಶಾಲೆ, ಕಲಿಸಿದ ಗುರುಗಳ ಸ್ಮರಣೆ ಸದಾ ಕಾಲ ಇರಬೇಕು. ಕಲಿತ ಶಾಲೆಯ ಋಣ ತೀರಿಸುವ ಕೆಲಸ ನಮ್ಮಿಂದ ಆಗಬೇಕು. ಅಂದಾಗ ಶಾಲೆಯು ಒಂದು ಜ್ಞಾನ ದೇಗುಲ ಎಂಬ ಮನೋಭಾವ ಮೂಡುತ್ತದೆ ಎಂದು ಕೆನರಾ ಬ್ಯಾಂಕ್ ವಿಭಾಗಿಯ ವ್ಯವಸ್ಥಾಪಕ ಗಣೇಶ್ ಬಸ್ತವಾಡಕರ್ ಹೇಳಿದರು.

ಅವರು ಬೆಳ್ಳಟ್ಟಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಗೆ ಕೆನರಾ ಬ್ಯಾಂಕ್ ಅನುದಾನದಡಿ ಕೊಡಮಾಡಿದ ಶಾಲಾ ಸ್ಮಾರ್ಟ್ ಕ್ಲಾಸ್ ಹಾಗೂ ಟಿವಿ, ಲ್ಯಾಪ್ಟಾಪ್, ಸಿಸಿ ಕ್ಯಾಮೆರಾದಂತಹ ಉಪಕರಣಗಳನ್ನು ಉದ್ಘಾಟಿಸಿ ಮಾತನಾಡಿದರು.

ಸಾನ್ನಿಧ್ಯ ವಹಿಸಿದ್ದ ರಾಮಲಿಂಗೇಶ್ವರ ದಾಸೋಹ ಮಠದ ಬಸವರಾಜ ಮಹಾಸ್ವಾಮೀಜಿ ಮಾತನಾಡಿ, ಶಿಕ್ಷಕರು ಮಕ್ಕಳ ಗುಣಾತ್ಮಕ ಕಲಿಕೆ ಹಾಗೂ ಪ್ರಗತಿಗೆ ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ತಮ್ಮನ್ನು ತಾವು ತೊಡಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವುದು ಖುಷಿ ತಂದಿದೆ ಎಂದರು.

ಜಿ.ಪಂ ಮಾಜಿ ಸದಸ್ಯ ಶಿವಪ್ರಕಾಶ್ ಮಹಾಜನಶೆಟ್ರ ಮಾತನಾಡಿ, ಕೆನರಾ ಬ್ಯಾಂಕ್ ನೀಡಿದ ಉಪಕರಣಗಳ ಸದುಪಯೋಗ ಮಾಡಿಕೊಂಡು ಶಾಲೆಯ ಅಭಿವೃದ್ಧಿಗೆ ಶ್ರಮಿಸಬೇಕೆಂದು ಕರೆ ನೀಡಿದರು.

ವಿಭಾಗೀಯ ವ್ಯವಸ್ಥಾಪಕ ಪಿ.ಶ್ರೀನಿವಾಸ್, ಮ್ಯಾನೇಜರ್ ನರಸಿಂಹರಾಜು, ಎಸ್‌ಡಿಎಂಸಿ ಅಧ್ಯಕ್ಷ ಕೊಟ್ರೇಶ ಬಣಗಾರ, ಬಿಇಓ ಜಿ.ಎಂ. ಮುಂದಿನಮನಿ, ಬಿ.ಎಸ್. ಭಜಂತ್ರಿ, ಗ್ರಾ.ಪಂ ಅಧ್ಯಕ್ಷ ರಮೇಶ ನಿರ್ವಾಣಶೆಟ್ಟರ, ಉಪಾಧ್ಯಕ್ಷೆ ಗಂಗವ್ವ ತಳವಾರ, ಸದಸ್ಯರಾದ ತಿಮ್ಮರಡ್ಡಿ ಮರಡ್ಡಿ, ಶಿವನಗೌಡ ಪಾಟೀಲ, ಮೋಹನ ಗುತ್ತೆಮ್ಮನವರ, ಮಲ್ಲಯ್ಯ ಶೀಲವಂತಮಠ, ರಮೇಶ ಮಲ್ಲಾಡದ, ದಿಲ್‌ಶಾದಬಿ ಚೌರಿ, ರೇಣುಕಾ ಮಾಳಮ್ಮನವರ, ಶೋಭಾ ದೇಸಳ್ಳಿ, ಗಿರೀಶರೆಡ್ಡಿ ಮೇಕಳಿ, ಕೊಟ್ರೇಶ ಸಜ್ಜನರ, ಆರ್.ಎಂ. ಯಣಿಗಾರ, ಎಂ.ಬಿ. ಹಾವೇರಿ, ಶಿವಾನಂದ ಹಾವನೂರ, ಗಿರೀಶ ಕೋಡಬಾಳ, ಸಂಜೀವ ಬೆಲಹುಣಸಿ ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!