ಬಳ್ಳಾರಿ: ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಅವರು ಬಂಧನಕ್ಕೆ ಒಳಗಾಗಿ ಬರೋಬ್ಬರಿ 100 ದಿನ ತುಂಬಿದೆ. ದರ್ಶನ್ ಅವರ ಪರವಾಗಿ ಇನ್ನೂ ಜಾಮೀನು ಅರ್ಜಿ ಸಲ್ಲಿಕೆ ಆಗಿಲ್ಲ. ಹೀಗಾಗಿ ಅವರು ಮತ್ತಷ್ಟು ದಿನ ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ಇದೆ. ಇನ್ನೂ ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿ 20 ದಿನ ಕಳೆದಿದೆ.
ಈ 20 ದಿನಗಳಲ್ಲಿ ದರ್ಶನ್ ತಾಯಿ ಮೀನಾ ತೂಗುದೀಪ ಒಮ್ಮೆಯೂ ಮಗನನ್ನು ನೋಡಲು ಬಳ್ಳಾರಿ ಜೈಲಿಗೆ ಹೋಗಿರಲಲ್ಲ. ಇದರಿಂದ ಬೇಸರಗೊಂಡಿದ್ದ ದರ್ಶನ್ ತಾಯಿಯನ್ನು ನೋಡಬೇಕು ಎಂದು ಹಂಬಲಿಸಿದ್ದರು. ಇದೀಗ ಮಗನನ್ನು ನೋಡಲು ತಾಯಿ ಮೀನಾ ತೂಗುದೀಪ ಮಗಳ ಜೊತೆ ಬಳ್ಳಾರಿ ಜೈಲಿಗೆ ಆಗಮಿಸಿದ್ದಾರೆ.
ಬಳ್ಳಾರಿ ಜೈಲಿಗೆ ಶಿಫ್ಟ್ ಆದ ನಂತರ ದರ್ಶನ್ ನೋಡಲು ಮೀನಾ ಬಂದಿರಲಿಲ್ಲ. ಇದೀಗ ದರ್ಶನ್ ತಾಯಿ, ಸಹೋದರಿ ದಿವ್ಯಾ, ಬಾವ ಮಂಜುನಾಥ ಹಾಗೂ ಅಕ್ಕನ ಮಕ್ಕಳು ಆಗಮಿಸಿ ದರ್ಶನ್ ಕುಶಲೋಪರಿ ವಿಚಾರಿಸಿದ್ದಾರೆ. ಮಗನನ್ನು ಕಂಡೊಡನೆ ಮೀನಾ ಹಾಗೂ ಸಹೋದರಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ ಎನ್ನಲಾಗುತ್ತಿದೆ.