HomeEntertainmentನಿರ್ದೇಶಕರಿಗೆ ದುಬಾರಿ ವಾಚ್‌ ಗಿಫ್ಟ್‌ ನೀಡಿದ ಮೆಗಾಸ್ಟಾರ್ ಚಿರಂಜೀವಿ: ಬೆಲೆ ಎಷ್ಟು ಗೊತ್ತಾ?

ನಿರ್ದೇಶಕರಿಗೆ ದುಬಾರಿ ವಾಚ್‌ ಗಿಫ್ಟ್‌ ನೀಡಿದ ಮೆಗಾಸ್ಟಾರ್ ಚಿರಂಜೀವಿ: ಬೆಲೆ ಎಷ್ಟು ಗೊತ್ತಾ?

For Dai;y Updates Join Our whatsapp Group

Spread the love

ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಬ್ಲಾಕ್ ಬಸ್ಟರ್ ಸಿನಿಮಾ ನೀಡಿದ ಟಾಲಿವುಡ್ ನಿರ್ದೇಶಕ ಬಾಬಿರಿ ಅವರಿಗೆ ಚಿರಂಜೀವಿ ಅಚ್ಚರಿಯ ಗಿಫ್ಟ್‌ ನೀಡಿ ಶಾಕ್‌ ನೀಡಿದ್ದಾರೆ.

ಮೆಗಾಸ್ಟಾರ್ ಚಿರಂಜೀವಿ ನೀಡಿದ ಗಿಫ್ಟ್​ ನೋಡಿ ನಿರ್ದೇಶಕರು ಫುಲ್​ ಖುಷಿಯಾಗಿದ್ದಾರೆ. ಇನ್ನೂ ಮೆಗಾಸ್ಟಾರ್ ಚಿರಂಜೀವಿ, ನಿರ್ದೇಶಕ ಬಾಬಿರಿಗೆ ಕೊಟ್ಟ ಈ ವಾಚಿನ ಬೆಲೆ ಬರೋಬ್ಬರಿ 6 ರಿಂದ 10 ಲಕ್ಷ ರೂಪಾಯಿ ಮೌಲ್ಯದ್ದು ಎನ್ನಲಾಗಿದೆ.

ಒಮೆಗಾ ಸೀಮಾಸ್ಟರ್ ವಾಚ್ ಇದಾಗಿದ್ದು, ಈ ವಿಚಾರವನ್ನ ನಿರ್ದೇಶಕ ಬಾಬಿಯವರೇ ತನ್ನ ಇನ್​ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರು ಶೇರ್ ಮಾಡಿಕೊಂಡಿರೋ ಫೋಸ್ಟ್‌ನಲ್ಲಿ, ಚಿರಂಜೀವಿ ಅವರಿಂದ ಒಂದು ಅಚ್ಚರಿಯ ಉಡುಗೊರೆ ಸಿಕ್ಕಿದೆ. ಈ ಉಡುಗೊರೆಗೆ ನಾನು ಬೆಲೆ ಕಟ್ಟಲು ಸಾಧ್ಯವಿಲ್ಲ. ಧನ್ಯವಾದಗಳು.. ಈ ಕ್ಷಣವನ್ನ ನಾನು ಸದಾ ನೆನಪಲ್ಲಿಟ್ಟುಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಕೈಯಲ್ಲಿ ವಾಚ್‌ ಧರಿಸಿರುವ ಫೋಟೋಗಳನ್ನು ಸಹ ಬಾಬಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದನ್ನು ನೋಡಿದವರೆಲ್ಲರೂ, ಚಿರಂಜೀವಿಯ ಸ್ನೇಹಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಚಿರಂಜೀವಿ ಪ್ರಸ್ತುತ ವಿಶ್ವಂಭರ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬಿಂಬಿಸಾರ ಖ್ಯಾತಿಯ ವಶಿಷ್ಠ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ತ್ರಿಷಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇದರ ಜೊತೆಗೆ ಚಿರಂಜೀವಿ ಬ್ಲಾಕ್‌ಬಸ್ಟರ್ ನಿರ್ದೇಶಕ ಅನಿಲ್ ರವಿಪುಡಿ ನಿರ್ದೇಶನದಲ್ಲಿ ಒಂದು ಸಿನಿಮಾ ಕೂಡ ಮಾಡುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಈ ಚಿತ್ರದಲ್ಲಿ ಲೇಡಿ ಸೂಪರ್ ಸ್ಟಾರ್ ನಯನತಾರಾ ನಾಯಕಿಯಾಗಿ ನಟಿಸುತ್ತಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!