ತುಮಕೂರು: ಜಿಲ್ಲೆಯಲ್ಲಿ ಮೀಟರ್ ಬಡ್ಡಿ ದಂಧೆ ಹಾವಳಿ ಹೆಚ್ಚಾಗಿದೆ. ಮೈಕ್ರೋ ಫೈನಾನ್ಸ್ ಮತ್ತು ಬಡ್ಡಿದಂಧೆ ಕೋರರಿಗೆ ಕಡಿವಾಣ ಹಾಕಲು ಸರ್ಕಾರ ಸುಗ್ರೀವಾಜ್ಞೆಗೆ ತರಲಾಗಿದೆ. ಆದರೂ ಕೂಡ ಈ ಕಿರುಕುಳಗಳು ಮಾತ್ರ ನಿಲ್ತಾನೇ ಇಲ್ಲ.
ಇದೀಗ ಬಡ್ಡಿ ದಂಧೆಗೆ ವ್ಯಕ್ತಿಯೊರ್ವ ವಿಷ ಸೇವಿಸಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು ನಗರದ ಬಟವಾಡಿಯಲ್ಲಿ ನಡೆದಿದೆ. ಬಟವಾಡಿಯ ಮಹಾಲಕ್ಷ್ಮಿನಗರದ ವಾಸಿ ಅಂಜನಮೂರ್ತಿ(35) ಮೃತ ದುರ್ಧೈವಿಯಾಗಿದ್ದು, ಆಟೋ ಚಾಲಾಕನಾಗಿದ್ದ ಅಂಜನಮೂರ್ತಿ ವಿವಿಧೆಡೆ ಬಡ್ಡಿಗೆ ಸುಮಾರು 5ಲಕ್ಷ ಸಾಲ ಪಡೆದಿದ್ದರು.
ಎನ್.ಆರ್.ಕಾಲೊನಿ ಸುಪ್ರೀಂ ಫೈನಾನ್ಸ್, ಫೈನಾನ್ಸ್ ವೆಂಕಿ ಸೇರಿ ಇತರರಿಂದ ಬಡ್ಡಿಗಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ವಿಡಿಯೋದಲ್ಲಿ ಅಳಲು ತೋಡಿಕೊಂಡಿದ್ದಾರೆ. ನನ್ನ ಕುಟುಂಬಕ್ಕೆ ರಕ್ಷಣೆ ನೀಡುವಂತೆ ವಿಡಿಯೋದಲ್ಲಿ ಹೇಳಿಕೆ ನೀಡಲಾಗಿದೆ. ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.