ಕಂಪ್ಲಿ: ಬೇವಿನ ಮರದಲ್ಲಿ ಹಾಲು; ನೋಡಲು ಬಂದ ಜನಸಾಗರ!

0
Spread the love

ಕಂಪ್ಲಿ:- ಬೇವಿನ ಮರದಲ್ಲಿ ಸತತ ನಾಲ್ಕು ದಿನಗಳಿಂದ ಹಾಲು ಚಿಮ್ಮುತ್ತಿದೆ. ಇನ್ನ ಈ ವಿಸ್ಮಯ ನೋಡಲು ಕಂಪ್ಲಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಮುಗಿ ಬಿದ್ದಿದ್ದಾರೆ.ಇದಕ್ಕೆ ಸಂಭಂದಪಟ್ಟ ವರದಿ ಇಲ್ಲಿದೆ ನೋಡಿ..

Advertisement

ಯೆಸ್, ಬೇವಿನ ಮರದಿಂದ ಸತತ ನಾಲ್ಕು ದಿನಗಳಿಂದ ಹಾಲು ಸುರಿತಿದೆ, ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಬೆಳಗೋಡ್ ರಸ್ತೆಯ ಹೊರವಲಯದಲ್ಲಿ ಈ ಘಟನೆ ನಡೆದಿದೆ.

ದೇವರ ವಿಸ್ಮಯ ಎಂದು ಪೂಜೆ ಪುನಸ್ಕಾರ ನಡೆಸ್ತಾ ಇದ್ದಾರೆ ಅಲ್ಲಿನ ಜನ, ಸ್ಥಳದಲ್ಲೇ ಎಂಟು-ಹತ್ತು ಬೇವಿನ ಮರಗಳಿದ್ದರೂ ಸಹ ಈ ಒಂದೇ ಬೇವಿನ ಮರದಲ್ಲಿ ಹಾಲು ಸುರಿತ್ತಿರೋದು ಮಾತ್ರ ವಿಸ್ಮಯ ಎಂದು ಅಲ್ಲಿನ ಜನ ಹೇಳ್ತಾರೇ.

ಅಷ್ಟೇ ಅಲ್ಲ ಸಾಕಷ್ಟು ಜನರು ತಂಡೋಪ ತಂಡವಾಗಿ ಬಂದು ಬೇವಿನ ಮರಕ್ಕೆ ಪೂಜೆ ಮಾಡ್ತಿದ್ದಾರೆ.

ಈ ಹಿಂದೆ ಕೂಡಾ ಕಂಪ್ಲಿ ಭಾಗದಲ್ಲಿ ಈ ತರಹ ವಿಸ್ಮಯಗಳು ಕಂಡಿದ್ದವು ಅಂತೇ, ಆದ್ರೇ ಸತತ 4ದಿನದಿಂದ ನಿರಂತರವಾಗಿ ಹಾಲಿನ ಮಾದರಿಯ ನೊರೆ ಸುರಿಯುತ್ತಿರೋ ಮಾತ್ರ ಅಚ್ಚರಿ ಜನರಲ್ಲಿ ತಂದಿದೆ.

ಇನ್ನು ಈ ಘಟನೆ ಬಗ್ಗೆ ಸ್ಥಳೀಯ ದೇವಸ್ಥಾನದ ಆರ್ಚಕರು, ಪೂಜಾರಿಗಳು ಹಾಗೂ ಸ್ಥಳೀಯರು ತಮ್ಮ ತಮ್ಮ ಅಭಿಪ್ರಾಯಗಳನ್ನ ವ್ಯಕ್ತಪಡಿಸಿದ್ದಾರೆ.

ಇದು ಧರ್ಮದ ಸಂಕೇತ, ಇದು ದೇವಿಯ ಸಂಕೇತ ಎಂದು ಜನಸಾಮಾನ್ಯರ ಅಭಿಪ್ರಾಯವಾದ್ರೇ, ಇನ್ನು ವೈಜ್ಞಾನಿಕವಾಗಿ ಇದೊಂದು ಮರದ ಸಹಜ ಕ್ರಿಯೆ ಎಂಬುದು ತಿಳಿದುಬರುತ್ತೆ.

ಇದು ಪವಾಡವೋ ಅಥವಾ ಸಹಜ ಕ್ರಿಯೆಯೋ ಎಂಬುದನ್ನ ಸಂಭಂದಪಟ್ಟ ಅಧಿಕಾರಿಗಳೇ ಖಚಿತ ಪಡಿಸಬೇಕಿದೆ.

ವೈಜ್ಞಾನಿಕವಾಗಿ ಹೇಳೋದಾದ್ರೇ, ಇದೊಂದು ಮರದ ಸಹಜ ಕ್ರಿಯೆ, ಈ ಮರದ ಒಳಗಡೆ ಬ್ಯಾಕ್ಟೀರಿಯಾಗಳ ಇನ್ಸ್ ಪೇಕ್ಷನ್ ನಿಂದ ಮರದ ದೇಹದ ಮೇಲೆ ಬಿಳಿ ಹಾಲಿನ ನೊರೆ ಉಂಟಾಗುತ್ತೆ, ಅಥವಾ ಕಾಯಿಲೆಯಿಂದ ತುತ್ತಾಗಿದೆ ಎಂಬ ಅರ್ಥವನ್ನು ಸೂಚಿಸುತ್ತೆ ಅಂತೆ.

ಏನೇ ಇರಲಿ, ಆ ಮರದಲ್ಲಿ ಪವಾಡ ಎನ್ನುವಂತೆ ದೇವರು ನೆಲೆಸಿದ್ದಾರೋ ಅಥವಾ ಮರಕ್ಕೆ ಬಂದಿರುವ ಕಾಯಿಲೆಯೋ ಎಂಬುದನ್ನ ಇದನ್ನು ಅರಿತವರೇ ಖಚಿತಪಡಿಸಬೇಕಿದೆ.

ಇನ್ನು ಇದು ಮೌಡ್ಯವೋ ಇಲ್ಲಾ, ವೈಜ್ಞಾನಿಕವೋ ಎಂಬುದು ತಮ್ಮ ಭಾವನೆಗೆ ಬಿಟ್ಟದ್ದು..


Spread the love

LEAVE A REPLY

Please enter your comment!
Please enter your name here