HomeGadag Newsಸತ್ಸಂಗದಿಂದ ಮಾನಸಿಕ ನೆಮ್ಮದಿ : ಅರುಣ ಬಿ. ಕುಲಕರ್ಣಿ

ಸತ್ಸಂಗದಿಂದ ಮಾನಸಿಕ ನೆಮ್ಮದಿ : ಅರುಣ ಬಿ. ಕುಲಕರ್ಣಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ನರೇಗಲ್ : ನಿತ್ಯದ ತನ್ನ ಜಂಜಡದ ಬದುಕಿನಲ್ಲಿ ಮನುಷ್ಯ ತನ್ನ ನೆಮ್ಮದಿಯನ್ನೇ ಕಳೆದುಕೊಂಡಿರುತ್ತಾನೆ. ಅವನಿಗೆ ಮಾನಸಿಕ ನೆಮ್ಮದಿ ದೊರಕುವುದು ಸತ್ಸಂಗದಿಂದ ಮಾತ್ರ. ಸತ್ಸಂಗವು ಮನುಷ್ಯನ ನೆಮ್ಮದಿಯನ್ನು ಹೆಚ್ಚಿಸುವುದರಲ್ಲಿ ಸಹಾಯ ಮಾಡುತ್ತದೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಅರುಣ ಬಿ. ಕುಲಕರ್ಣಿ ಹೇಳಿದರು.

ಪಟ್ಟಣದ ಶ್ರೀ ದತ್ತಾತ್ರೇಯ ದೇಸ್ಥಾನದಲ್ಲಿ ಜರುಗಿದ ಎರಡನೇ ವಾರದ ಹನುಮಾನ ಚಾಲೀಸಾ ಪಠಣದ ಸತ್ಸಂಗದ ಸಭೆಯಲ್ಲಿ ಅವರು ಮಾತನಾಡಿದರು.

ವಾರವಾರವೂ ಈ ಸತ್ಸಂಗದ ಸಭೆ ತನ್ನ ಗುರಿಯನ್ನು ಸಾಧಿಸುವತ್ತ ದಿಟ್ಟ ಹೆಜ್ಜೆಯನ್ನಿಡುತ್ತಿದೆ. ಪ್ರತಿ ಗುರುವಾರ ನಡೆಸುವ ಈ ಸತ್ಸಂಗದಲ್ಲಿ ಹದಿಮೂರು ಬಾರಿ ಹನುಮಾನ ಚಾಲೀಸಾವನ್ನು ಪಠಿಸಿ ಅದೆಷ್ಟೋ ಜನ ನೆಮ್ಮದಿಯನ್ನು ಕಾಣುತ್ತಿದ್ದಾರೆ ಎಂದು ಕುಲಕರ್ಣಿ ಹೇಳಿದರು.

ಈ ಸಂದರ್ಭದಲ್ಲಿ ಎ.ಜಿ. ಕುಲಕರ್ಣಿ, ನಾಗೇಶಭಟ್ಟ ಗ್ರಾಮಪುರೋಹಿತ, ಬಿ.ಎಲ್. ಕುಲಕರ್ಣಿ, ಅಜಿತ ಕುಲಕರ್ಣಿ, ಮುಕುಂದ ಸೂರಭಟ್ಟನವರ, ವಿಮಲಾಬಾಯಿ ಗ್ರಾಮಪುರೋಹಿತ, ಶೋಭಾ ಕುಲಕರ್ಣಿ, ಸನ್ಮತಿ ಸದರಜೋಷಿ, ಪದ್ಮಾ ಕುಲಕರ್ಣಿ, ಪ್ರಿಯಾ ಕುಲಕರ್ಣಿ, ಶೋಭಾ ಸೂರಭಟ್ಟನವರ, ಪ್ರಭಾ ರಾಯಭಟ್ಟನವರ, ರಾಜಶ್ರೀ ಕುಲಕರ್ಣಿ, ವಾಣಿ, ಭಾಗ್ಯಾಬಾಯಿ ಕಾಳೆ, ವಿದ್ಯಾ ಗ್ರಾಮಪುರೋಹಿತ, ಲಕ್ಷ್ಮಿ ಗ್ರಾಮಪುರೋಹಿತ, ಸುಶಿಲಾ ಪುರಾಣಿಕ, ಅನಿತಾ ಗ್ರಾಮಪುರೋಹಿತ, ರೇಣುಕಾ ಗ್ರಾಮಪುರೋಹಿತ ಮುಂತಾದವರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img