ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳ ಮಧ್ಯೆ ದಿನಸಿ, ತರಕಾರಿ ಬೆಲೆ ಗಗನಕ್ಕೇರಿವೆ. ಇದರ ನಡುವೆ ಇದೀಗ ಹಾಲಿನ ದರ ಏರಿಕೆ ಬಗ್ಗೆಯೂ ಸರ್ಕಾರದ ಮಟ್ಟದಲ್ಲಿ ಭಾರೀ ಚರ್ಚೆಯಾಗಿತ್ತಿದೆ. ಹೌದು ಸಂಕ್ರಾಂತಿ ಹಬ್ಬದ ಬಳಿಕ ಹಾಲಿನ ದರದ ಪರಿಷ್ಕರಣೆ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಹೇಳಿದ್ದಾರೆ.
Advertisement
ನಗರದಲ್ಲಿ ಮಾತನಾಡಿದ ಅವರು, ಬುಧವಾರ ನಡೆದ ಹಾಲಿನ ಒಕ್ಕೂಟದ ಸಭೆಯಲ್ಲಿ 5 ರೂ. ದರ ಏರಿಕೆಗೆ ಪ್ರಸ್ತಾವನೆ ಬಂದಿದೆ. ಈ ಬಗ್ಗೆ ನಾವು ಪರಿಶೀಲಿಸುತ್ತೇವೆ. ಸರ್ಕಾರದ ಮುಂದೆ ಪ್ರಸ್ತಾವನೆ ಇಟ್ಟು ತೀರ್ಮಾನ ಮಾಡುತ್ತೇವೆ.
ಇನ್ನೂ ನಂದಿನಿ ಹಾಲಿನಲ್ಲಿ 50 ಎಂಎಲ್ ಹೆಚ್ಚುವರಿ ನೀಡಿ, 2 ರೂ. ಹೆಚ್ಚಳ ಮಾಡಲಾಗಿತ್ತು. ಈ ಹೆಚ್ಚುವರಿ ಹಾಲು ವಾಪಸ್‍ಗೆ ನಿರ್ಧಾರ ಮಾಡಲಾಗಿದೆ ಅದರ ಜೊತೆಗೆ ಹೆಚ್ಚುವರಿ ಹಾಲಿಗೆ ವಿಧಿಸಿದ್ದ ಹೆಚ್ಚುವರಿ ಹಣ ಎರಡು ರೂಪಾಯಿಯನ್ನು ವಾಪಾಸ್ ಪಡೆಯುತ್ತೇವೆ ಎಂದು ಹೇಳಿದ್ದಾರೆ.