Gadaga: ಕಾಣೆಯಾಗಿದ್ದ ಮಹಿಳೆ ಬಾವಿಯಲ್ಲಿ ಪತ್ತೆ; ಬೆಚ್ಚಿಬಿದ್ದ ಗ್ರಾಮಸ್ಥರು!

0
Spread the love

ಗದಗ:- ಕಾಣೆಯಾಗಿದ್ದ ಮಹಿಳೆ ಬಾವಿಯಲ್ಲಿ ಪತ್ತೆಯಾಗಿರುವ ವಿಚಿತ್ರ ಘಟನೆ ಗದಗ ಜಿಲ್ಲೆ ತೋಟಗಂಟಿ ಗ್ರಾಮದಲ್ಲಿ ಜರುಗಿದೆ.

Advertisement

ಈ ಮಹಿಳೆ ಮೂರು ದಿನ ಬಾವಿಯಲ್ಲಿದ್ದು, ಬದುಕಿದ್ದೇ ಪವಾಡ ಎನ್ನಲಾಗಿದೆ. ಕಾಣೆಯಾಗಿದ್ದ ವಿವಾಹಿತ ಮಹಿಳೆ ಅದೇ ಗ್ರಾಮದ ಬಾವಿಯಲ್ಲಿ ಪತ್ತೆಯಾಗಿದ್ದು, ಘಟನೆ ಬಳಿಕ ಅಲ್ಲಿನ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

ಹೊಲವೊಂದರಲ್ಲಿನ ನೀರಿಲ್ಲದ ಹಳೇ ಬಾವಿಯಲ್ಲಿ ಮೂರು ದಿನಗಳ ನಂತರ ಮಹಿಳೆ ಪತ್ತೆಯಾಗಿದ್ದಾಳೆ. ಸದ್ಯ ಮಹಿಳೆಯು ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇನ್ನೂ ಮಹಿಳೆಯನ್ನು ಬಾವಿಗೆ ಬಿಸಾಡಿದ್ದು ಮತ್ತೋರ್ವ ಅಪರಿಚಿತ ಮಹಿಳೆ ಎನ್ನಲಾಗಿದೆ. ಅಲ್ಲದೇ ಆ ಅಪರಿಚಿತೆ ಮಹಿಳೆ ಯಾರು ಅನ್ನೋದೆ ಭಯಾನಕವಾಗಿದೆ.

ಆರು ತಿಂಗಳ ಹಿಂದಷ್ಟೇ ಈ ಮಹಿಳೆ ಮದುವೆಯಾಗಿದ್ದರು. ಆಗಸ್ಟ್‌ 20 ರಂದು ನಸುಕಿನ ಜಾವ ಮನೆಯ ಅಂಗಳದಲ್ಲಿ ಕೆಲಸ ಮಾಡುತ್ತಿದ್ದಲು. ಅಲ್ಲಿಗೆ ಬಂದ ಸೀರೆಯುಟ್ಟುಕೊಂಡ ಅಪರಿಚಿತ ಮಹಿಳೆಯು, ಕುತ್ತಿಗೆ ಭಾಗಕ್ಕೆ ಹಿಡಿದು ಮನೆ ಬಿಟ್ಟು ಬರುವಂತೆ ಬಲವಂತ ಮಾಡಿದ್ದಾಳೆ.

ಕೈ ಬಳೆ, ಕಾಲುಂಗರ ನೀಡುವಂತೆ ಅಪರಿಚಿತ ಮಹಿಳೆ ಒತ್ತಾಯ ಮಾಡಿದ್ದಾಳೆ. ಕಣ್ಣು ಕಾಣದಂತೆ ಮರೆ ಮಾಡಿ ಕುತ್ತಿಗೆ ಹಿಡಿದು ಮಹಿಳೆ ಭಯಪಡಿಸಿದ್ದಾಳೆ. ಗೋವಿನ ಜೋಳದ ಹೊಲದ ಮೂಲಕ ನನ್ನನ್ನು ಎಳೆದುಕೊಂಡು ಹೋದಳು ಎಂದು ಚಿಕಿತ್ಸೆ ಪಡೆಯುತ್ತಿರುವ ಮಹಿಳೆ ಹೇಳಿದ್ದಾರೆ.

ಅಲ್ಲದೇ ನಂತರ ತಾಳಿ ಕೇಳಿ ನನ್ನನ್ನು ಬಾವಿಗೆ ತಳ್ಳಿದರು. ಬಾವಿಗೆ ಬಿದ್ದ ಮಾರನೆ ದಿನ ನನಗೆ ಪ್ರಜ್ಞೆ ಬಂದಿದೆ. ಆಗ ಕಿರುಚಿದರು ಸಹಾಯಕ್ಕೆ ಯಾರು ಬರಲಿಲ್ಲ. ಆ. 22 ರಂದು ಧ್ವನಿ ಕೇಳಿದ ಜನರು ನನ್ನ ಕಾಪಾಡಿದ್ದಾರೆ. ಆದರೆ ಯಾರು ನನಗೆ ಎಳೆದುಕೊಂಡು ಹೋದರು ಎನ್ನುವ ನಿಖರ ಮಾಹಿತಿ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಒಟ್ಟಾರೆ ಇದೊಂದು ವಿಚಿತ್ರ ರೀತಿಯ ಘಟನೆಯಾಗಿದ್ದು, ಸದ್ಯ ಮಹಿಳೆಗೆ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.


Spread the love

LEAVE A REPLY

Please enter your comment!
Please enter your name here