HomeGadag Newsಕ.ವಿ.ಮಂ.ನಿವೃತ್ತ ನೌಕರರ ಮಾಸಿಕ ಸಭೆ

ಕ.ವಿ.ಮಂ.ನಿವೃತ್ತ ನೌಕರರ ಮಾಸಿಕ ಸಭೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಕ.ವಿ.ಮಂ ನಿವೃತ್ತ ನೌಕರರ ಮಾಸಿಕ ಸಭೆ ವಿಭಾಗೀಯ ಕಛೇರಿಯ ಆವರಣದಲ್ಲಿರುವ ಸಮುದಾಯ ಭವನದಲ್ಲಿ ಎ.ಎನ್. ಬಸ್ತಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಹೊಸ ಹೆಸ್ಕಾಂ ವೃತ್ತ ಕಛೇರಿ ಕಾರ್ಯಾರಂಭಗೊಳಿಸಿದ ಪ್ರಭಾರ ಅಧೀಕ್ಷಕ ಅಭಿಯಂತರ ರಾಜೇಶ ಕಲ್ಯಾಣ ಶೆಟ್ಟರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಮಹತ್ವದ ಟೆಂಡರ್, ಲೈನ್‌ಮನ್‌ಗಳ ಮುಂಬಡ್ತಿ ಸೇರಿ ಇತರೆ ಕೆಲಸಗಳಿಗೆ ಹುಬ್ಬಳ್ಳಿ ಕಛೇರಿಗೆ ಅಲೆದಾಟ ತಪ್ಪಿದಂತಾಗಿದೆ. ಲೈನ್‌ಮನ್ ಹಾಗೂ ಗುತ್ತಿಗೆದಾರರಲ್ಲಿ ನವಚೈತನ್ಯ ಮೂಡಿದ್ದು, ಅನಗತ್ಯ ಖರ್ಚು ಮತ್ತು ಸಮಯ ಉಳಿತಾಯವಾಗಿದೆ ಎಂದರು.
ಬಾಗಲಕೋಟೆ ವಿಭಾಗದ ಕ.ವಿ.ಮಂ ನಿವೃತ್ತ ಸಂಘದ ಅಧ್ಯಕ್ಷ ವ್ಹಿ.ಬಿ. ಪಾಟೀಲ ಹಾಗೂ ಕಾರ್ಯದರ್ಶಿ ವ್ಹಿ.ಆರ್. ತೆಗ್ಗಿ ಅವರು ನಿವೃತ್ತರ ಪಿಂಚಣಿ ಪುಸ್ತಕದಲ್ಲಿ ಪಿಂಚಣಿ ಹಾಗೂ ಕುಟುಂಬ ಪಿಂಚಣಿ ದಾಖಲಾತಿಗಳ ಬಗ್ಗೆ ವಿವರಿಸಿದರು. ಶಂಸದ ಬೇಗಂ ಹುಯಿಲಗೋಳ ರಂಜಾನ ಹಬ್ಬದ ಪ್ರಯುಕ್ತ ದಾಸೋಹ ಸೇವೆಯನ್ನು ವಹಿಸಿಕೊಂಡಿದ್ದರು.
ಈ ಸಂದರ್ಭದಲ್ಲಿ ಸಿ.ಎಚ್. ಬಾಗಲಕೋಟ, ಎನ್.ವ್ಹಿ. ಹೇಮಗಿರಮಠ, ಬಿ.ಎನ್. ಘಾಳಿ, ಕೆ.ಎಸ್. ಲಕ್ಕುಂಡಿ, ಫಕ್ಕೀರಪ್ಪ ತುಪ್ಪದ, ಬಿ.ಎಂ. ಬಾಣಿ, ಎಸ್.ಎಫ್. ಸೈದಾಪೂರ, ಬಿ.ಎಂ. ಕಂಬಿ, ಆಯ್.ಎಸ್. ಸರೂರ, ಜಿ.ಆರ್. ಅಗಸಿಯವರ, ಎಸ್.ಆರ್. ಕಲಾಲ, ಎಚ್.ಬಿ. ಬಡಿಗೇರ, ಬಿ.ಎಸ್. ಪೂಜಾರ, ನಾಗನಗೌಡ ಚಿಕ್ಕಣ್ಣವರ, ಎಫ್.ಎಸ್. ಕೊಣ್ಣೂರ, ವ್ಹಿ.ಪಿ. ಸವಡಿ, ಎಚ್.ಆಯ್. ಚೌಬಾರಿ, ವ್ಹಿ.ಎಫ್. ಹೊಸಮನಿ, ಎಂ.ಜಿ. ಫತ್ತೇನವರ, ಎಸ್.ಎಂ. ಬಗಲಿ, ವ್ಹಿ.ಎಚ್. ಮುಧೋಳ, ಬಿ.ಎಂ. ಹಿರೇಮಠ, ಜೆ.ಜಿ. ನದಾಫ, ಎಸ್.ಎಸ್. ಹಿರೇಮಠ ಹಾಗೂ ಇನ್ನಿತರರು ಸಭೆಯಲ್ಲಿ ಉಪಸ್ಥಿತರಿದ್ದರು. ವ್ಹಿ.ಎಲ್. ಅಯ್ಯನಗೌಡರ ಪ್ರಾರ್ಥಿಸಿದರು. ಬಿ.ವ್ಹಿ. ಕಾಮಣ್ಣವರ ಸ್ವಾಗತಿಸಿದರು. ಕೆ.ಜಿ. ತಿರ್ಲಾಪೂರ ವಂದಿಸಿದರು ಎಂದು ಜಿ.ಎಂ. ಯಾನಮಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಾಧ್ಯಕ್ಷ ಜಿ.ಎಂ. ಯಾನಮಶೆಟ್ಟಿ ಸಂಘ ನಡೆದು ಬಂದ ದಾರಿ ಹಾಗೂ ಇತರೆ ಚಟುವಟಿಕೆಗಳ ಬಗ್ಗೆ ತಿಳಿಸಿದರು. ಪಿ.ಎಂ. ಜಂಬಗಿ ಸ್ವರಚಿತ ಕವನಗಳನ್ನು ಹಾಡಿದರು. ವಾಯ್.ಬಿ. ಭಾನಾಪೂರ ಶರಾವತಿ ಪತ್ತಿನ ಸಂಘ ಹಾಗೂ ಸಮುದಾಯ ಭವನದ ಬಗ್ಗೆ ವಿವರಿಸಿದರು. ಎಸ್.ಬಿ. ಓಲಿ ಕೇಂದ್ರ ಸಮಿತಿಯ ಚಟುವಟಿಕೆಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು.

Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!