HomeBengaluru Newsಪ್ರಜ್ವಲ್ ರೇವಣ್ಣಗೆ ಮತ್ತಷ್ಟು ಸಂಕಷ್ಟ: FSL ವರದಿಯಲ್ಲಿ ವಿಡಿಯೋಗಳು ಅಸಲಿ ಎಂದು ಬಹಿರಂಗ!

ಪ್ರಜ್ವಲ್ ರೇವಣ್ಣಗೆ ಮತ್ತಷ್ಟು ಸಂಕಷ್ಟ: FSL ವರದಿಯಲ್ಲಿ ವಿಡಿಯೋಗಳು ಅಸಲಿ ಎಂದು ಬಹಿರಂಗ!

For Dai;y Updates Join Our whatsapp Group

Spread the love

ಬೆಂಗಳೂರು:- ಪ್ರಜ್ವಲ್ ರೇವಣ್ಣಗೆ ಮತ್ತಷ್ಟು ಸಂಕಷ್ಟ ಎದುರಾಗಿದ್ದು, ವೈರಲ್ ಆದ ವಿಡಿಯೋಗಳು ಅಸಲಿ ಎಂದು FSL ವರದಿಯಲ್ಲಿ ಬಹಿರಂಗವಾಗಿದೆ.

ವಿಡಿಯೋಗಳು ಯಾವುದೇ ಅನಿಮೇಷನ್, ಗ್ರಾಫಿಕ್ಸ್, ಎಡಿಟ್​, ಮಾರ್ಫ್​ ಮಾಡಿದ್ದಲ್ಲ. ಅವು ಅಸಲಿ ವಿಡಿಯೋಗಳು ಎಂದು ಎಫ್​ಎಸ್​ಎಲ್​ ವರದಿಯಲ್ಲಿ ದೃಢಪಟ್ಟಿದೆ. ಈ ಮೂಲಕ ಪ್ರಜ್ವಲ್ ರೇವಣ್ಣಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.

ಪ್ರಜ್ವಲ್​ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಆದರೆ, ಆ ವಿಡಿಯೋ ನಕಲಿ, ವಿರೋಧಿಗಳು ಎಡಿಟ್, ಮಾರ್ಫಿಂಗ್​ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಬಳಿಕ ಎಸ್​ಐಟಿ ವಿಡಿಯೋಗಳ ಅಸಲಿಯತ್ತು ತಿಳಿಯಲು ಎಫ್​ಎಸ್​ಎಲ್​ಗೆ ಕಳುಹಿಸಿತ್ತು. ಇದೀಗ ವಿಡಿಯೋಗಳ ಎಫ್​ಎಸ್​ಎಲ್​ ವರದಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ಅಶ್ಲೀಲ ವಿಡಿಯೋ ಅಸಲಿ ಎಂಬುದು ಸಾಬೀತಾಗಿದೆ. ​​ ಇನ್ನು ವಿಡಿಯೋದಲ್ಲಿರುವ ವ್ಯಕ್ತಿಗೂ, ಬಂಧಿತ ಆರೋಪಿಯೇ ಎಂಬುದು ಇನ್ನೂ ಸಾಬೀತಾಗಿಲ್ಲ. ಈ ಸಂಬಂಧ ಇನ್ನಷ್ಟೇ ವರದಿ ಬರಬೇಕಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!