ಬೆಂಗಳೂರು: ಬೆಂಗಳೂರಿನ ಗೋವಿಂದರಾಜನಗರದ ಬಳಿ ಇರುವ ಪಂಚಶೀಲನಗರದಲ್ಲಿ ಗೀಸರ್ ಸೋರಿಕೆಯಿಂದ ತಾಯಿ ಹಾಗೂ 4 ವರ್ಷದ ಮಗು ಮೃತಪಟ್ಟ ಘಟನೆ ಜರುಗಿದೆ.
26 ವರ್ಷದ ಚಾಂದಿನಿ ತನ್ನ ನಾಲ್ಕು ವರ್ಷದ ಮಗು ಯುವಿ ಸ್ನಾನ ಮಾಡಿಸಲು ಗೀಸರ್ ಆನ್ ಮಾಡಿದ್ದರು. ಆದರೆ ಗೀಸರ್ ಸೋರಿಕೆಯಾಗುತ್ತಿರುವುದು ಗೊತ್ತಿರಲಿಲ್ಲ. ಗೀಸರ್‌ನಿಂದ ಸೋರಿಕೆಯಾದ ಕಾರ್ಬನ್ ಡೈಆಕ್ಸೈಡ್ ಬಾತ್ ರೂಂ ತುಂಬಿಕೊಂಡಿದೆ. ಮಗುವಿನ ಸ್ನಾನ ಮಾಡಿಸಲು ಬಾತ್ ರೂಂ ಒಳ ಹೊಕ್ಕ ತಾಯಿ ಮಗು ಕೆಲವೇ ನಿಮಿಷದಲ್ಲಿ ಅಸ್ವಸ್ಥರಾಗಿದ್ದಾರೆ. ಮಗುವನ್ನು ಎತ್ತಿ ಹೊರಬಂದರೂ ಇಬ್ಬರು ವಿಲವಿಲ ಒದ್ದಾಡಿದ್ದಾರೆ.
ಅಸ್ವಸ್ಥರಾಗಿ ಬಿದ್ದಿದ್ದ ತಾಯಿ ಹಾಗೂ ಮಗುವನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ಎರಡು ಜೀವಗಳು ಗೀಸರ್ ಸೋರಿಕೆಗೆ ಬಲಿಯಾಗಿದೆ.
ಎಚ್ಚರಿಕೆ ಅಗತ್ಯ:-
ಗೀಸರ್ ಬಳಸುವ ಮಂದಿ ಅತೀವ ಎಚ್ಚರಿಕೆ ವಹಿಸಬೇಕು. ಬಿಸಿ ನೀರಿಗಾಗಿ ಬಹುತೇಕರು ಗೀಸರ್ ಬಳಕೆ ಮಾಡುತ್ತಾರೆ. ಆದರೆ ಗೀಸರ್ ಸೋರಿಕೆ ಅತ್ಯಂತ ಅಪಾಯಕಾರಿಯಾಗಿದೆ.



