ಸೂಪರ್ ಸ್ಟಾರ್ ರಜನಿಕಾಂತ್ ಮಾಜಿ ಅಳಿಯ ಹಾಗೂ ಸೀತಾ ರಾಮಂ ಬೆಡಗಿ ಮೃಣಾಲ್ ಠಾಕೂರ್ ನಡುವೆ ಪ್ರೀತಿ ಪ್ರೇಮ ಶುರುವಾಗಿದೆ ಎಂಬ ಸುದ್ದಿ ಕೇಳಿ ಬಂದಿದೆ. ಅದಕ್ಕೆ ಪೂರಕವಾಗಿ ಇಬ್ಬರು ಹಲವು
ಕಡೆಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಇದೀಗ ಇಬ್ಬರ ನಡುವಿನ ಗಾಸಿಪ್ ಬಗ್ಗೆ ನಟಿ ಮೃಣಾಲ್ ಠಾಕೂರ್ ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡಿದ್ದಾರೆ.
‘ಸನ್ ಆಫ್ ಸರ್ದಾರ್ 2’ ಕಾರ್ಯಕ್ರಮಕ್ಕೆ ಧನುಶ್ ಆಗಮಿಸಿದ್ದರು ಮತ್ತು ಮೃಣಾಲ್ ಜೊತೆ ಆಪ್ತವಾಗಿದ್ದರು. ಅವರೇ ಧನುಶ್ ಅವರನ್ನು ಆಮಂತ್ರಿಸಿದ್ದರು ಎಂದು ಹೇಳಲಾಗಿತ್ತು. ಆದರೆ, ಆ ರೀತಿ ಇಲ್ಲ. ‘ಧನುಶ್ ಸನ್ ಆಫ್ ಸರ್ದಾರ್ 2 ಚಿತ್ರದ ಈವೆಂಟ್ನಲ್ಲಿ ಭಾಗವಹಿಸಿದ್ದರು. ಇದನ್ನು ಯಾರೂ ತಪ್ಪಾಗಿ ಭಾವಿಸಬಾರದು. ಅಜಯ್ ದೇವಗನ್ ಅವರು ಧನುಶ್ನ ಆಮಂತ್ರಿಸಿದ್ದು’ ಎಂದು ಮೃಣಾಲ್ ಹೇಳಿದ್ದಾರೆ.
ಧನುಶ್ ಹಾಗೂ ರಜನಿಕಾಂತ್ ಮಗಳು ಐಶ್ವರ್ಯಾ ವಿವಾಹ ಆಗಿದ್ದರು. ಹಲವು ವರ್ಷಗಳ ಬಳಿಕ ಇವರ ಸಂಬಂಧ ಕೊನೆ ಆಯಿತು. ಈ ದಂಪತಿ ಈಗ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ. ಈ ಬೆನ್ನಲ್ಲೇ ಧನುಶ್ ಅವರು ಮೃಣಾಲ್ ಜೊತೆ ಕಾಣಿಸಿಕೊಳ್ಳುವ ಮೂಲಕ ಸಾಕಷ್ಟು ಚರ್ಚೆಗಳು ಹುಟ್ಟಿಕೊಂಡಿತ್ತು. ಇದೀಗ ಇದಕ್ಕೆಲ್ಲಾ ಮೃಣಾಲ್ ಸ್ಪಷ್ಟನೆ ನೀಡಿದ್ದಾರೆ.