ವಿಜಯನಗರ:- ಮನೆ ಖಾಲಿ ಮಾಡುವಂತೆ ನೋಟಿಸ್ ಕೊಟ್ಟಿರುವ ನಗರಸಭೆ ವಿರುದ್ಧ ವಿಜಯನಗರ ಬಡಾವಣೆ ಕೊಳಗೇರಿ ನಿವಾಸಿಗಳು ರಾತ್ರೋ ರಾತ್ರಿ ಪ್ರತಿಭಟನೆ ನಡೆಸಿದ್ದಾರೆ.
ರಾತ್ರೋ ರಾತ್ರಿ ರಸ್ತೆಗಿಳಿದು ಪ್ರತಿಭಟನೆ ಮಾಡಿದ ಸ್ಥಳೀಯರು, ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೇ ಸ್ಥಳೀಯ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿಗೆ ಮಹಿಳೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಕೈಯ್ಯಲ್ಲಿ ಸಂವಿಧಾನ ಶಿಲ್ಪಿಯ ಭಾವಚಿತ್ರ ಹಿಡಿದು ಚಿಕ್ಕ ಮಕ್ಕಳ ಸಮೇತ ರಾತ್ರೀ ನಗರಸಭೆ ವಿರುದ್ಧ ಸ್ಥಳೀಯರು ಧರಣಿ ಸತ್ಯಾಗ್ರಹ ಮಾಡಿದ್ದಾರೆ. ಚಿತ್ರದುರ್ಗ ನಗರಸಭೆ ವ್ಯಾಪ್ತಿಯ ವಾರ್ಡ ನಂ 23 ವಿಜಯನಗರ ಬಡಾವಣೆಯ ನಿವಾಸಿಗಳಿಗೆ ನಗರಸಭೆ ನೋಟಿಸ್ ಜಾರಿ ಮಾಡಿದೆ.
ಅಲ್ಲದೇ ನಾಳೆ ಜೆಸಿಬಿಯಿಂದ ಮನೆ ತೆರವು ಮಾಡ್ತೀವಿ ಎಂದ ಅಧಿಕಾರಿಗಳ ಮಾತಿಗೆ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ನಾವು 35-40 ವರ್ಷಗಳಿಂದ ಇಲ್ಲೇ ವಾಸವಿದ್ದೀವಿ. ಈಗ ಇದ್ದಕ್ಕಿದ್ದಂತೆ ತೆರವು ಮಾಡಿದ್ರೆ ಎಲ್ಲಿಗೆ ಹೋಗೋದು..?? ಡಿಸಿ, ನಗರಸಭೆ ಅಧಿಕಾರಿಗಳು, ಸ್ಥಳೀಯ ಶಾಸಕರು, ನಮ್ಮ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಅಂತಾ ಆಕ್ರೋಶ ಹೊರ ಹಾಕಿದ್ದಾರೆ.
ಸ್ಥಳೀಯ ಶಾಸಕ ವೀರೇಂದ್ರ ಪಪ್ಪಿ ದೇವರ ಮೇಲೆ ಆಣೆ ಮಾಡಿಸಿಕೊಂಡಿ ಓಟು ಹಾಕಿಸಿಕೊಂಡ್ರು. ಈಗ ನೀವು ಗೋವಾದಲ್ಲಿದ್ದೀರಿ, ನಾಳೆ ಬೆಳಗಾದ್ರೆ ನಮ್ಮ ಮನೆ ಒಡೀತಾರೆ. ಮಕ್ಕಳು ಮರಿಕಟ್ಟಿಕೊಂಡು ಬೀದಿಗೆ ಬೀಳಬೇಕಾ!? ಎಂದು ಪ್ರಶ್ನಿಸಿದ ಮಹಿಳೆ ಮಾರಕ್ಕ ಎನ್ನುವವರು, ಸ್ಥಳೀಯ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.
ಅಲ್ಲದೇ ನಮಗೆ ಈ ಜಾಗದಲ್ಲಿ ಹಕ್ಕುಪತ್ರ ನೀಡಿ ಅಂತಾ ಆಗ್ರಹಿಸಿದ್ದಾರೆ.