ಕೊಲೆ ಪ್ರಕರಣ: ದರ್ಶನ್ ಬಗ್ಗೆ ರಾಧಿಕಾ ಕುಮಾರಸ್ವಾಮಿ ಹೇಳಿದ್ದೇನು?

0
Spread the love

ಬೆಂಗಳೂರು:- ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಬಗ್ಗೆ ರಾಧಿಕಾ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ದರ್ಶನ್‌ ಅವರ ಪ್ರಕರಣ ಮನಸ್ಸಿಗೆ ತುಂಬಾ ನೋವು ಕೊಡುವ ವಿಚಾರ. ಅನಾಥರು ಮತ್ತು ಮಂಡ್ಯ ಸಿನಿಮಾದಲ್ಲಿ ಅವರನ್ನು ಹತ್ತಿರದಿಂದ ನೋಡಿದ್ದೇನೆ. ಶೂಟಿಂಗ್ ವೇಳೆ ಟೆಕ್ನಿಶಿಯನ್, ಸೆಟ್‌ ಹುಡುಗರ ಜೊತೆ ಅಣ್ಣಾ ಬನ್ನಿ ಹೋಗಿ ಎಂದು ಗೌರವ ಕೊಟ್ಟೇ ಮಾತನಾಡುತ್ತಿದ್ದರು. ಎಲ್ಲರ ಜೊತೆ ಸುಲಭವಾಗಿ ಬೆರೆಯೋರು” ಎಂದು ಹೇಳಿದ್ದಾರೆ.

ತಾವೊಬ್ಬ ದೊಡ್ಡ ನಟ ಎನ್ನುವ ಅಹಂ ಕೂಡ ಅವರಲ್ಲಿ ಇರಲಿಲ್ಲ, ದೊಡ್ಡ ಹೀರೋ ಎನ್ನುವಂತೆ ಕೂಡ ನಡೆದುಕೊಳ್ಳುತ್ತರಲಿಲ್ಲ. ಆದರೆ ಈ ವಿಚಾರ ಕೇಳಿದಾಗ, ನಿಜಾನ ಇದು ಎನ್ನಿಸಿಬಿಡ್ತು. ಒಂದು ಕ್ಷಣ ನನಗೆ ನಂಬಲು ಆಗಲಿಲ್ಲ, ಇದೆಲ್ಲಾ ನಿಜವಾ ಎನ್ನುವ ಅನುಮಾನ ಶುರುವಾಯಿತು. ಆದರೆ ಅವರವರ ಜೀವನದಲ್ಲಿ ಏನಾಗಿದೆ ಎನ್ನುವುದು ಅವರಿಗೆ ಮಾತ್ರ ಗೊತ್ತಿರೋಕೆ ಸಾಧ್ಯ, ನಾನು ಇಷ್ಟು ಮಾತ್ರ ಹೇಳಬಲ್ಲೆ” ಎಂದಿದ್ದಾರೆ.

ಮಾಧ್ಯಮಗಳಲ್ಲಿ ಬರೋದು, ಯಾರೋ ಇದರ ಬಗ್ಗೆ ಹೇಳಿದಷ್ಟೇ ನಮಗೆ ಗೊತ್ತಾಗೋದು. ಆದರೆ ಅವರ ಬದುಕಿನಲ್ಲಿ ನಿಜಕ್ಕೂ ಏನಾಗಿದೆ ಎನ್ನುವುದು ನಮಗೆ ಗೊತ್ತಾಗಲ್ಲ. ಗೊತ್ತಿಲ್ಲದೆ ಅವರ ಬಗ್ಗೆ ಕಾಮೆಂಟ್ ಮಾಡೋದು ತಪ್ಪು, ಪ್ರಾಮಾಣಿಕವಾಗಿ ಹೇಳಬೇಕು ಎಂದರೆ ದರ್ಶನ್‌ ನಮ್ಮ ಚಿತ್ರರಂಗಕ್ಕೆ ಬೇಕು, ಅವರಿಗೆ ಒಳ್ಳಾದಗಲಿ ಎಂದು ಕೇಳ್ತೀನಿ ಅಷ್ಟೆ ಎಂದರು.

ಎಲ್ಲರ ಬದುಕಿನಲ್ಲೂ ಕೆಲವೊಂದು ಘಟನೆಗಳು ನಡೆಯುತ್ತವೇ, ಮುಂದೆ ಕೆಟ್ಟದ್ದಾಗುತ್ತದೆ ಎಂದು ಮುಂಚಿತವಾಗಿ ಯಾರಿಗೂ ಗೊತ್ತಾಗಲ್ಲ. ಗೊತ್ತಿದ್ದರೆ ಅಂತಹ ಘಟನೆ ನಡೆಯಲು ಕೂಡ ಬಿಡುವುದಿಲ್ಲ. ಎಲ್ಲರ ಬದುಕಿನಲ್ಲಿ ಕೂಡ ಕಹಿ ಘಟನೆಗಳು ನಡೆದಿರುತ್ತವೆ. ನಮ್ಮ ಬದುಕಿನಲ್ಲೂ ಅಂತಹ ಕೆಟ್ಟ ಘಟನೆಗಳನ್ನು ಅನುಭವಿಸಿರುತ್ತೇವೆ ಎಂದರು.


Spread the love

LEAVE A REPLY

Please enter your comment!
Please enter your name here