ಕೊಪ್ಪಳ:– ಮುಸ್ಲಿಮರದ್ದು ಒಂದು ರೀತಿ ಕಾಂಟ್ರ್ಯಾಕ್ಟ್ ಮದುವೆ ಎಂದು ಹೇಳುವ ಮೂಲಕ ಶಾಸಕ ಬಸವರಾಜ್ ರಾಯರೆಡ್ಡಿ ಅವರು, ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಮುಸ್ಲಿಮರ ಮದುವೆ ಕಾಂಟ್ರ್ಯಾಕ್ಟ್ ಮ್ಯಾರೇಜ್. ಅವರದ್ದು ಹಿಂದೂಗಳ ರೀತಿ ಏಳು ಜನ್ಮದ ಅನುಬಂಧ ಅಲ್ಲ ಎಂದಿದ್ದಾರೆ. ಮುಸ್ಲಿಮರ ಮದುವೆ ನೋಂದಣಿ ಆಗುತ್ತದೆ. ಮುಸ್ಲಿಮರ ಗುರುಗಳು ನೋಂದಣಿ ಪುಸ್ತಕದಲ್ಲಿ ದಾಖಲಿಸುತ್ತಾರೆ. ಅವರದ್ದು ಕಾಂಟ್ರ್ಯಾಕ್ಟ್ ಮ್ಯಾರೇಜ್ ಬೇಡ ಎಂದರೆ ಬಿಟ್ಟು ಬಿಡುತ್ತಾರೆ ಅದರಲ್ಲೇನು ತಪ್ಪಿಲ್ಲ. ಅವರದ್ದು ಹಿಂದುಗಳ ರೀತಿ ಏಳೇಳು ಜನುಮದ ಬಂಧ ಅಲ್ಲ ಎಂದರು.
ನರೇಂದ್ರ ಮೋದಿ ಗೊತ್ತಿದ್ದು, ಮಾತನಾಡುತ್ತಾರೋ ಏನೋ ಗೊತ್ತಿಲ್ಲ. ಮೋದಿ ಮಾತಾಡಿದ್ದು ತಪ್ಪು. ಮುಸ್ಲಿಮರ ಸ್ಥಿತಿ-ಗತಿ ತೀರಾ ಹೀನಾಯವಾಗಿದೆ. ಕೇಂದ್ರದ ವಕ್ಫ್ ತಿದ್ದುಪಡಿ ಕಾಯ್ದೆಯಾಗಿದೆ ಎನ್ನುವ ಓಬಿಸಿ ಮೀಸಲಾತಿ ತೆಗೆದು, ಮುಸ್ಲಿಮರಿಗೆ ನೀಡುತ್ತಿದ್ದಾರೆ ಎಂದ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ತಿರುಗೇಟು ನೀಡಿದರು.
ಇದು ಜಾತಿ ಗಣತಿ ಅಲ್ಲ. ಇದು ಜನರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿ-ಗತಿ ತಿಳಿಯುವ ಗಣತಿಯಾಗಿದೆ. 2015-16ರಲ್ಲಿ ಸಿಎಂ ಸಿದ್ದರಾಮಯ್ಯ ಮಾಡಿಸಿದ್ದಾರೆ. ಇದು ಸ್ವಾಗತಾರ್ಹವಾಗಿದೆ. ಶಿಕ್ಷಕರು ಮನೆ-ಮನೆಗೆ ಹೋಗಿ ಗಣತಿ ಮಾಡಿದ್ದಾರೆ. 100% ಗಣತಿ ಆಗಲು ಸಾಧ್ಯವಿಲ್ಲ. ನಾನು ಕಳೆದ 1 ವರ್ಷದ ಹಿಂದೆ ಬಿಡುಗಡೆ ಮಾಡಲು ಒತ್ತಾಯ ಮಾಡಿದ್ದೇನೆ. ಸದ್ಯ 34 ಮಂತ್ರಿಗಳ ಕೈಯಲ್ಲಿ ಮಾತ್ರ ಗಣತಿ ವರದಿ ಇದೆ ಎಂದರು.