ಬೆಂಗಳೂರು: ಈಗಲೂ ನನಗೆ ಜೀವ ಬೆದರಿಕೆ ಇದೆ. ನನಗೆ ರಕ್ಷಣೆ ಕೊಡುವುದು ಸರ್ಕಾರದ ಜವಾಬ್ದಾರಿ ಎಂದು ಮಾಜಿ ಸಚಿವ, ಎಂಎಲ್ಸಿ ಸಿಟಿ ರವಿ ಹೇಳಿದ್ದಾರೆ. ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಈಗಲೂ ನನಗೆ ಜೀವ ಬೆದರಿಕೆ ಇದೆ. ನನಗೆ ರಕ್ಷಣೆ ಕೊಡುವುದು ಸರ್ಕಾರದ ಜವಾಬ್ದಾರಿ. ಬೆಳಗಾವಿ ಆಯುಕ್ತ,
ಎಸ್ಪಿ ಮತ್ತು ಇನ್ನತರೆ ಅಧಿಕಾರಿಗಳು ನನ್ನ ಜೊತೆ ನಡೆದುಕೊಂಡ ರೀತಿ ನಿಗೂಢವಾಗಿತ್ತು. ಪೊಲೀಸರ ಅಧಿಕೃತ ಫೋನ್, ಖಾಸಗಿ ಫೋನ್ ಕಾಲ್ ಬಗ್ಗೆ ತನಿಖೆ ಆಗಲಿ. ನನ್ನ ಫೋನ್ ಟ್ಯಾಪಿಂಗ್ ಆಗುತ್ತಿದೆ. ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ರಾತ್ರಿ ನನ್ನ ಅಂಕಲಗಿ ಠಾಣೆಗೆ ಕರೆದುಕೊಂಡು ಹೋದರು. ಆಗ ಏನಾದರೂ ತಿನ್ನಿ ಸಾರ್ ನಮ್ಮದು ಕರ್ಮದ ಜೀವನ, ತಿನ್ನಿ ಸಾರ್ ಎಂದರು. ಅಲ್ಲಿಂದ ಆಸ್ಪತ್ರೆಗೆ ಕರೆದುಕೊಂಡು ಬಂದರು. ನಾನು ವೈದ್ಯರಿಗೆ ಪೆಟ್ಟು ಬಿದ್ದಿರುವ ಜಾಗ ತೋರಿಸಿದೆ. ಲಿವರ್ಗೆ ಸ್ವಲ್ಪ ಪೆಟ್ಟು ಬಿದ್ದಿದೆ ಸ್ಕ್ಯಾನಿಂಗ್ ಮಾಡೋಕೆ ವೈದ್ಯರು ಹೇಳಿದರು. ನಂತರ ನನ್ನ ಹೊರಗೆ ಕೂರಿಸಿ ಪೊಲೀಸರು ಒಳಗೆ ಹೋಗಿ ವೈದ್ಯರ ಜೊತೆಗೆ ಮಾತನಾಡಿದರು ಎಂದು ತಿಳಿಸಿದರು.