ಮೈಸೂರು:- ನಗರದ ಹೊರ ವಲಯದ ಬೆಮಲ್ ಕಾರ್ಖಾನೆಯಲ್ಲಿ ಹುಲಿ ಓಡಾಟ ನಡೆಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಾಜಾರೋಷವಾಗಿ ಓಡಾಡುವ ಹುಲಿ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿಯಲಾಗಿದೆ. ಹುಲಿ ಓಡಾಟದಿಂದ ಬೆಮೆಲ್ ಸುತ್ತಮುತ್ತಲಿನ ಪ್ರದೇಶದ ಜನರಲ್ಲಿ ಭಾರೀ ಆತಂಕ ಮೂಡಿಸಿದೆ.
ಕಳೆದ ಕೆಲ ದಿನಗಳಿಂದ ಮೈಸೂರು ಜಿಲ್ಲೆಯಲ್ಲಿ ಹುಲಿ ಕಾಟ ಹೆಚ್ಚಾಗಿದೆ. ಸರಗೂರು, ಹುಣಸೂರು ತಾಲೂಕು ಬಳಿಕ ಈಗ ಮೈಸೂರು ನಗರದ ಹೊರವಲಯದಲ್ಲಿ ಹುಲಿ ಕಾಣಿಸಿಕೊಂಡಿದ್ದು, ಜನರ ನಿದ್ದೆಗೆಡಿಸಿದೆ.



