Homecultureಶ್ರೀ ಸೋಮೇಶ್ವರನಿಗೆ ನಾದ ನೈವೇದ್ಯ

ಶ್ರೀ ಸೋಮೇಶ್ವರನಿಗೆ ನಾದ ನೈವೇದ್ಯ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪುಲಿಗೆರೆ ಉತ್ಸವ 2ನೇ ದಿನವಾದ ಶನಿವಾರ ಉದಯರಾಗ-2 ಬೆಳ್ಳಂಬೆಳಿಗ್ಗೆ ಮಳೆ ಸಿಂಚನ ಮತ್ತು ಮೋಡ ಮುಸುಕಿದ ವಾತಾವರಣದಲ್ಲಿ ಸ್ಥಳೀಯ ಕಲಾವಿದ ಕೃಷ್ಣ ಕ್ಷತ್ರಿಯ ಅವರ ಶಹನಾಯಿ ವಾದನ ವಿಶೇಷ ಮೆರಗು ನೀಡಿತ್ತು.

ಸೂರ್ಯನ ಹೊಂಗಿರಣಗಳ ಚಿತ್ತಾರ, ದೇವಸ್ಥಾನದ ಘಂಟೆ-ಜಾಗಟೆಗಳ ಝೇಕಾಂರದ ನಡುವೆ ಕಲಾವಿದರ ಕುಟುಂಬದ ಶಹನಾಯಿ ಶ್ರೀ ಸೋಮೇಶ್ವರನಿಗೆ ನಾದ ನೈವೇದ್ಯ ಮಾಡಿದಂತಿತ್ತು. ರಾಗ ಗುಜರಿ ತೋಡಿಯಿಂದ ನಾದ ಮೊಳಗಿಸಿದ ಕೃಷ್ಣ ಕ್ಷತ್ರಿಯ, ಅರ್ಧ ಗಂಟೆಗೂ ಹೆಚ್ಚು ಕಾಲ ಕಿರವಾಣಿಯಲ್ಲಿ ದುನ್ ನುಡಿಸಿದರು.

ನಂತರ ತೊರೆದು ಜೀವಿಸು ಬಹುದೆ ಹರಿ ನಿನ್ನ ಚರಣವನು ಎಂಬ ದಾಸರ ಪದ ನುಡಿಸಿದರು.
ಮಕ್ಕಳಾದ ಶ್ರೀಹರಿ ಕ್ಷತ್ರಿಯ ತಬಲಾ, ರಾಘವೇಂದ್ರ ಕ್ಷತ್ರಿಯ ಶಹನಾಯಿ ಸಹವಾದ್ಯದ ಸಾಥ ನೀಡಿದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!