ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ಬನ್ನಿಕೊಪ್ಪದ ಶ್ರೀ ಜ.ಅ. ಪ್ರೌಢಶಾಲೆಯ ಹಿಂದಿ ಭಾಷಾ ಸಹ ಶಿಕ್ಷಕ ನಾಗಭೂಷಣ ಚ.ಹಿರೇಮಠ ಇವರು ಮಹಾರಾಷ್ಟ್ರದ ಕಾಂಪ್ಟೆಯಲ್ಲಿ ನಡೆದ NCC ಆಫೀಸರ್ಸ್ ಟ್ರೇನಿಂಗ್ ಅಕಾಡೆಮಿಯಲ್ಲಿ 2 ತಿಂಗಳು ನಡೆದ NCC ಅಧಿಕಾರಿಗಳ ತರಬೇತಿ ಶಿಬೀರದಲ್ಲಿ ತರಬೇತಿಯನ್ನು ಪಡೆದು ಶ್ರೀ ಜ.ಅ. ಪ್ರೌಢಶಾಲೆಯ ಕಿರಿಯರ NCC ವಿಭಾಗದ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ಇವರು ೩ ವರ್ಷಗಳಿಂದ ಮುಂಡರಗಿಯ ಶ್ರೀ ಜ.ಅ.ಪ್ರೌಢಶಾಲೆಯಲ್ಲಿ NCC ಕೇರ್ ಟೇಕರ್ ಅಧಿಕಾರಿಗಳಾಗಿ ಸೇವೆ ಸಲ್ಲಿಸಿ, ಇದೀಗ ಪೂರ್ಣಪ್ರಮಾಣದ NCC ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ನಾಗಭೂಷಣ ಹಿರೇಮಠರಿಗೆ ಪೂಜ್ಯ ಶ್ರೀ ಮ.ನಿ.ಪ್ರ. ನಾಡೋಜ ಜಗದ್ಗುರು ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಹಾಗೂ ಶ್ರೀಮಠದ ಉತ್ತರಾಧಿಕಾರಿಗಳಾದ ಶ್ರೀ ಮ.ನಿ.ಪ್ರ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಆಶೀರ್ವದಿಸಿದ್ದಾರೆ.
ಸಂಸ್ಥೆಯ ಆಡಳಿತಾಧಿಕಾರಿ ಬಿ.ಜಿ. ಜವಳಿ, ಮುಖ್ಯೋಪಾಧ್ಯಾಯ ಹಾಗೂ ನಿವೃತ್ತ NCC ಅಧಿಕಾರಿ ಎಸ್.ಸಿ. ಚಕ್ಕಡಿಮಠ, ಹಿರಿಯ NCC ವಿಭಾಗದ ಅಧಿಕಾರಿ ಕುಮಾರ ಎ.ಕಲ್ಮಠ, ಎಸ್.ಎಸ್. ಇನಾಮತಿ, ಗದಗ ಕರ್ನಾಟಕ 38 ಬೆಟಾಲಿಯನ್ ಅಧಿಕಾರಿ ಕರ್ನಲ್ ಸತ್ಯಪ್ರಕಾಶ ಯಾದವ ಹಾಗೂ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.



