ಉಡುಪಿ: ಶ್ರೀಕೃಷ್ಣನ ಆಯುಧವಾದ ಸುದರ್ಶನ ಚಕ್ರದ ಹೆಸರಿನಲ್ಲಿ ಭಾರತದ ಸೇನೆಯ ಬತ್ತಳಿಕೆಯಲ್ಲಿ ಇರುವ ‘ಮಿಷನ್ ಸುದರ್ಶನ ಚಕ್ರ’ ನಮ್ಮ ದೇಶದ ಬಲವಾದ ರಕ್ಷಣಾ ಗೋಡೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಉಡುಪಿಯ ಶ್ರೀಕೃಷ್ಣ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ಕೃಷ್ಣನು ಗೀತೆಯ ಸಂದೇಶವನ್ನು ಯುದ್ಧಭೂಮಿಯಲ್ಲಿ ನೀಡಿದನು, ಆ ಸಂದೇಶ ಇಂದಿಗೂ ಪ್ರಸ್ತುತವಾಗಿದೆ. ಕೇಂದ್ರ ಸರ್ಕಾರದ ಪ್ರತಿಯೊಂದು ಯೋಜನೆಯೂ ಶ್ರೀಕೃಷ್ಣನ ಶ್ಲೋಕಗಳಿಂದ ಪ್ರೇರಿತವಾಗಿದೆ,” ಎಂದು ತಿಳಿಸಿದರು.
ರಾಷ್ಟ್ರದ ಭದ್ರತೆ ಬಗ್ಗೆ ಮಾತನಾಡಿದ ಮೋದಿ,ನಮಗೆ ಶಾಂತಿ ಬೇಕು, ಆದರೆ ಶಾಂತಿಯನ್ನು ರಕ್ಷಿಸುವ ಶಕ್ತಿಯೂ ನಮ್ಮಲ್ಲಿದೆ. ಇದು ಹೊಸ ಭಾರತ, ನಾವು ಯಾರ ಮುಂದೂ ಬಗ್ಗುವುದಿಲ್ಲ, ಯಾರಿಗೂ ಜಗ್ಗುವುದಿಲ್ಲ. ಅಪರೇಷನ್ ಸಿಂಧೂರ್ ಸಮಯದಲ್ಲಿ ಇಡೀ ದೇಶ ನಮ್ಮ ಬದ್ಧತೆಯನ್ನು ಕಂಡಿದೆ,” ಎಂದರು.



