ಸಮಾಜದಲ್ಲಿ ಶಿಕ್ಷಕರಿಗೆ ಗೌರವಯುತ ಸ್ಥಾನವಿದೆ : ಆರ್.ಎಸ್. ಬುರಡಿ

0
'Nation Builder Award' for 51 teachers by InnerWheel Club
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಆದರ್ಶ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಮಕ್ಕಳಲ್ಲಿ ಆಂತರಿಕ ಮೌಲ್ಯಗಳನ್ನು ವೃದ್ಧಿಸುವ ಕಾರ್ಯ ಶಿಕ್ಷಕರಿಂದ ನಿರಂತರವಾಗಿ ನಡೆಯುತ್ತಿದೆ. ಶಿಕ್ಷಕರಿಗೆ ಸಮಾಜದಲ್ಲಿ ಗೌರವಯುತ ಸ್ಥಾನವಿದೆ ಎಂದು ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಹೇಳಿದರು.
ಅವರು ಸೋಮವಾರ ನಗರದ ಉಷಾದೇವಿ ಕುಷ್ಟಗಿ ರೋಟರಿ ಕಮ್ಯುನಿಟಿ ಕೇರ್ ಸೆಂಟರ್‌ನಲ್ಲಿ ಇನ್ನರ್‌ವ್ಹೀಲ್ ಕ್ಲಬ್ ಗದಗ-ಬೆಟಗೇರಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ನಿರರಂತರ ಸೇವೆ ಸಲ್ಲಿಸುತ್ತಿರುವ ಆಯ್ದ 51 ಶಿಕ್ಷಕ-ಶಿಕ್ಷಕಿಯರಿಗೆ ‘ನೇಷನ್ ಬಿಲ್ಡರ್ ಅವಾರ್ಡ್’ ಪ್ರದಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಎಲ್ಲರ ಅನುಭವಗಳು ಒಂದೇ ಆಗಿರುತ್ತದೆ. ಆದರೆ ಸಾಮಾನ್ಯರಿಗಿಂತ ಭಿನ್ನವಾದ ಅಸಮಾನ್ಯವಾದ ಅನುಭವ ಹೊಂದಿರುವವರೇ ನಿಜವಾದ ಸಾಧಕರು. ಇವರು ತಮ್ಮ ಬದುಕಿನ ಅನುಭವಗಳನ್ನು ಸಮಾಜದೊಡನೆ ಹಂಚಿಕೊಂಡು ಮುಂದೆ ಸಾಗುವರು. ಇದಕ್ಕೆ ಶಿಕ್ಷಕರು ಹೊರತಾಗಿಲ್ಲ ಎಂದರು.
ಪಿಡಿಸಿ ಪ್ರೇಮಾ ಗುಳಗೌಡ್ರ ಮಾತನಾಡಿ, ಇನ್ನರ್‌ವ್ಹೀಲ್ ಕ್ಲಬ್ ಅಂತಾರಾಷ್ಟ್ರೀಯ ಸಂಸ್ಥೆಯಾಗಿದ್ದು, ಸಂಸ್ಥೆಯ ಮಾರ್ಗಸೂಚಿಯನ್ನು ಅನುಸರಿಸಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ನೇಷನ್ ಬಿಲ್ಡರ್ ಅವಾರ್ಡ್ ಶೈಕ್ಷಣಿಕ ಕಾರ್ಯಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕ ಬಳಗಕ್ಕೆ ನೀಡುವ ಪ್ರಶಸ್ತಿಯಾಗಿದ್ದು, ಇಂದು ಕ್ಲಬ್‌ನಿಂದ 51 ಶಿಕ್ಷಕರನ್ನು ಸನ್ಮಾನಿಸಲಾಗಿದೆ. ಈಗಾಗಲೇ ಸರಕಾರಿ ಶಾಲೆಗಳನ್ನು ಪ್ರತಿ ವರ್ಷ ದತ್ತು ಪಡೆದು ಶಾಲೆಗಳಿಗೆ ಬೇಕಾದ ಶೈಕ್ಷಣಿಕ ಸೌಲಭ್ಯಗಳನ್ನು ಹಾಗೂ ವಿಕಲಚೇತನ, ಬಡಮಕ್ಕಳ, ಶೈಕ್ಷಣಿಕ ಪ್ರಗತಿಗೆ ಸಹಾಯ ನೀಡಲಾಗಿದೆ. ಬರಲಿರುವ ದಿನಗಳಲ್ಲಿ ಇನ್ನಷ್ಟು ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಿ ಕ್ಲಬ್ ಕಾರ್ಯ ನಿರ್ವಹಿಸಲಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಲಬ್ ಕಾರ್ಯದರ್ಶಿ ವೀಣಾ ತಿರ್ಲಾಪೂರ, ಶಿಕ್ಷಕರು ಮಕ್ಕಳ ಬಾಳಿನಲ್ಲಿ ಬೆಳಕು ಬೀರಬಲ್ಲ ಜ್ಯೋತಿಗಳು. ಶಿಕ್ಷಕರ ದಿನಾಚರಣೆಯ ಅಂಗವಾಗಿ ಗ್ರಾಮೀಣ ಹಾಗೂ ಶಹರ ವಲಯದ ವಿವಿಧ ಶಾಲೆಗಳ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಮುಖ್ಯವಾಗಿ ಕ್ಲಬ್‌ನ ದತ್ತು ಶಾಲೆ, ನನ್ನ ಶಾಲೆ ನನ್ನ ಕೊಡುಗೆ ಯಶಸ್ವಿ ಅನುಷ್ಠಾನ, ನಲಿ-ಕಲಿ ಬೋಧನೆಯ ಪೂರ್ಣತೆ, ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವವರು, 38 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ, ನಿವೃತ್ತಿಯ ಅಂಚಿನಲ್ಲಿರುವ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕ ಶಿಕ್ಷಕ-ಶಿಕ್ಷಕಿಯರನ್ನು ಸನ್ಮಾನಿಸಿ ಇನ್ನಷ್ಟು ಸ್ಪೂರ್ತಿ ತುಂಬಲಾಯಿತು ಎಂದರು.
ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಕ್ಲಬ್‌ನ ಮಾಜಿ ಅಧ್ಯಕ್ಷರಾದ ಅನ್ನಪೂರ್ಣ ವರವಿ, ಶಾಂತಾ ನಿಂಬಣ್ಣವರ, ಕ್ಲಬ್‌ನ ಸಹ ಕಾರ್ಯದರ್ಶಿ ಜ್ಯೋತಿ ದಾನಪ್ಪಗೌಡ್ರ, ಸದಸ್ಯರಾದ ಜಯಶ್ರೀ ಉಗಲಾಟ ವಹಿಸಿದ್ದರು. ನಂದಾ ಬಾಳಿಹಳ್ಳಿಮಠ ಇನ್ನರ್‌ವ್ಹೀಲ್ ಪ್ರಾರ್ಥನೆ ಮಾಡಿದರು. ಐಎಸ್‌ಓ ಪುಷ್ಪಾ ಭಂಡಾರಿ ನಿರೂಪಿಸಿದರು. ಕ್ಲಬ್‌ನ ಸಿಎಲ್‌ಸಿಸಿ ಸುಮಾ ಪಾಟೀಲ ವಂದಿಸಿದರು.
ಕಾರ್ಯಕ್ರಮದಲ್ಲಿ ಮೀನಾಕ್ಷಿ ಕೊರವನವರ, ಪೂಜಾ ಭೂಮಾ, ರಾಜೇಶ್ವರಿ ಬಳ್ಳಾರಿ, ಸುಶೀಲಾ ಕೋಟಿ, ಅನ್ನಪೂರ್ಣ ವರವಿ, ವೀಣಾ ಕಾವೇರಿ, ರೇಣುಕಾ ಅಮಾತ್ಯ, ಜಯಶ್ರೀ ಪಾಟೀಲ, ವಿದ್ಯಾ ಗಂಜಿಹಾಳ, ಸಂಗೀತಾ ಪಟ್ಟಣಶೆಟ್ಟಿ, ಸಾಗರಿಕಾ ಅಕ್ಕಿ, ಪ್ರಿಯಾಂಕಾ ಹಳ್ಳಿ, ಸುವರ್ಣಾ ಮದರಿಮಠ, ರೇಖಾ ರೊಟ್ಟಿ ಮುಂತಾದವರಿದ್ದರು.
ಅಧ್ಯಕ್ಷತೆ ವಹಿಸಿದ್ದ ಕ್ಲಬ್ ಅಧ್ಯಕ್ಷೆ ನಾಗರತ್ನ ಮಾರನಬಸರಿ ಸ್ವಾಗತಿಸಿ ಮಾತನಾಡಿ, ಇನ್ನರ್‌ವ್ಹೀಲ್ ಕ್ಲಬ್ ಗದಗ-ಬೆಟಗೇರಿ 51ನೇ ಜುಬೇಲಿ ವರ್ಷಾಚರಣೆಯಲ್ಲಿದೆ. ಸಮಾಜಮುಖಿಯಾಗಿ ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಗೊಳಿಸಲಾಗಿದೆ. ಶಿಕ್ಷಕರ ದಿನಾಚರಣೆಯ ಅಂಗವಾಗಿ ಕ್ಲಬ್‌ನ ಸದಸ್ಯರ ಸಹಮತದಿಂದ 51 ಶಿಕ್ಷಕ-ಶಿಕ್ಷಕಿಯರನ್ನು ವಿವಿಧ ಹಂತಗಳಲ್ಲಿ ಆಯ್ಕೆ ಮಾಡಿ ಸನ್ಮಾನಿಸಿ ಗೌರವಿಸಲಾಗಿದೆ ಎಂದರು.

Spread the love
Advertisement

LEAVE A REPLY

Please enter your comment!
Please enter your name here