ವಿಜಯಸಾಕ್ಷಿ ಸುದ್ದಿ, ಗದಗ : ಗದಗ-ಬೆಟಗೇರಿ ನಗರಸಭೆಯ ವತಿಯಿಂದ ನಗರದ ಎಲ್ಲ ವಾರ್ಡ್ಗಳಿಗೆ ಡೆಂಗ್ಯೂ ತಡೆಗಟ್ಟಲು ಅಗತ್ಯ ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ. ಕಳೆದ 20 ದಿನಗಳಿಂದ ಗದಗ-ಬೆಟಗೇರಿ ನಗರಸಭೆ ಆರೋಗ್ಯಾಧಿಕಾರಿಗಳು, ದಫೇದಾರರು, ಪೌರಕಾರ್ಮಿಕರು, ವಾರ್ಡ್ ಸದಸ್ಯರ ಸಹಕಾರದಿಂದ ವಾರ್ಡ್ಗಳಲ್ಲಿ ಮಿತ್ಯಾಲಿನ್, ಡಿಡಿಟಿ ಸಿಂಪಡನೆ ಹಾಗು ಬ್ಲೀಚಿಂಗ್ ಪೌಡರ್ ಸಿಂಪಡನೆ, ಸಂಜೆ ಫಾಗಿಂಗ್ ಕಾರ್ಯವು ನಡೆಯುತ್ತಿದೆ.
ಆಯಾ ವಾರ್ಡ್ಗಳ ನಗರಸಭೆ ಸದಸ್ಯರು ಹಾಗೂ ನಗರಸಭೆಯ ಸದಸ್ಯರು ಮನೆ, ಮನೆಗೆ ತೆರಳಿ ಡೆಂಗ್ಯೂ ರೋಗ ಹರಡದಂತೆ ಅಗತ್ಯ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ವಿವರಿಸಿದರು. ಸ್ವಚ್ಛತೆಯನ್ನು ಕಾಪಾಡಲು ಸಾರ್ವಜನಿಕರಲ್ಲಿ ವಿನಂತಿಸಿ, ನಮ್ಮೆಲ್ಲರ ಆರೋಗ್ಯ ಕಾಪಾಡಲು ನಗರಸಭೆ ತಮ್ಮೊಂದಿಗೆ ಸದಾ ಸೇವೆಯಲ್ಲಿರುತ್ತದೆ ಎಂದು ಗದಗ-ಬೆಟಗೇರಿ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ ಅಬ್ಬಿಗೇರಿ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆಯ ಆಡಳಿತ ಪಕ್ಷದ ನಾಯಕರಾದ ವಿನಾಯಕ ಮಾನ್ವಿ, ನಗರಸಭೆಯ ಆರೋಗ್ಯ ಅಧಿಕಾರಿ ಆನಂದ ಬದಿ, ಸಹ ಅಧಿಕಾರಿ ಮಕಾಂದಾರ, ದಫೇದಾರರಾದ ಕೆಂಚಪ್ಪ ಪೂಜಾರ, ಚಂದ್ರು ಹಾದಿಮನಿ, ಹೇಮೆಶ ಎಟ್ಟಿ, ವಿಶ್ವ ಹಾಗು ಪೌರಕಾರ್ಮಿಕರು ಉಪಸ್ಥಿತರಿದ್ದರು.