ಡೈಮಂಡ್ ಲೀಗ್ ಕೂಟದಲ್ಲಿ ಹೊಸ ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ!

0
Spread the love

ಕತಾರ್‌ನ ಸುಹೀಮ್ ಬಿನ್ ಹಮದ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪ್ರತಿಷ್ಠಿತ ಡೈಮಂಡ್ ಲೀಗ್ ಕೂಟದಲ್ಲಿ ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಅದು ಬರೋಬ್ಬರಿ 90.23 ಮೀಟರ್ ಭರ್ಜಿ ಎಸೆಯುವ ಮೂಲಕ ಎನ್ನುವುದು ವಿಶೇಷ.

Advertisement

ಇದರೊಂದಿಗೆ ಜಾವೆಲಿನ್ ಕ್ರೀಡಾಕೂಟದಲ್ಲಿ ಅತೀ ದೂರ ಭರ್ಜಿ ಎಸೆದ ಭಾರತೀಯ ಎಂಬ ದಾಖಲೆ ನೀರಜ್ ಚೋಪ್ರಾ ಪಾಲಾಗಿದೆ. ಅಲ್ಲದೆ ಜಾವೆಲಿನ್ ಥ್ರೋನಲ್ಲಿ 90 ಮೀಟರ್ ಕ್ರಮಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಯನ್ನು ಸಹ ನೀರಜ್ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ 2022 ರ ಸ್ಟಾಕ್‌ಹೋಮ್ ಡೈಮಂಡ್ ಲೀಗ್‌ನಲ್ಲಿ ನೀರಜ್ ಚೋಪ್ರಾ 89.94 ಮೀಟರ್ ಎಸೆದಿದ್ದು, ಇದುವರೆಗಿನ ದಾಖಲೆಯಾಗಿತ್ತು. ಆದರೆ ಈ ಬಾರಿ 90 ಮೀಟರ್​ನೊಂದಿಗೆ ಹೊಸ ಇತಿಹಾಸ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ.

ತನ್ನ ಮೂರನೇ ಥ್ರೋನಲ್ಲಿ 90.23 ಮೀಟರ್ ಎಸೆದ ನೀರಜ್​ ಚೋಪ್ರಾಗೆ ಆ ಬಳಿಕ 90 ಮೀಟರ್​ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ. ಪರಿಣಾಮ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಜರ್ಮನಿಯ ಜೂಲಿಯನ್ ವೆಬರ್ 91.06 ಮೀಟರ್ ದೂರದೊಂದಿಗೆ ಮೊದಲ ಸ್ಥಾನ ಅಲಂಕರಿಸಿದರೆ, ನೀರಜ್ 90.23 ಮೀಟರ್​ನೊಂದಿಗೆ 2ನೇ ಸ್ಥಾನ ಪಡೆದರು.


Spread the love

LEAVE A REPLY

Please enter your comment!
Please enter your name here