HomeLife Styleಯಾವುದೇ ಕಾರಣಕ್ಕೂ ಚಳಿಗಾಲದಲ್ಲಿ ಈ ತರಕಾರಿಗಳನ್ನು ಫ್ರಿಡ್ಜ್‌ʼನಲ್ಲಿ ಇಡಬಾರದಂತೆ..!

ಯಾವುದೇ ಕಾರಣಕ್ಕೂ ಚಳಿಗಾಲದಲ್ಲಿ ಈ ತರಕಾರಿಗಳನ್ನು ಫ್ರಿಡ್ಜ್‌ʼನಲ್ಲಿ ಇಡಬಾರದಂತೆ..!

For Dai;y Updates Join Our whatsapp Group

Spread the love

ಸಾಮಾನ್ಯವಾಗಿ ಹೆಚ್ಚಿನವರು ಇಡೀ ವಾರಕ್ಕೆ ಬೇಕಾದ ಹಣ್ಣು–ತರಕಾರಿಗಳನ್ನು ಒಂದೇ ಬಾರಿಗೆ ಖರೀದಿಸಿ ಫ್ರಿಡ್ಜ್‌ನಲ್ಲಿ ಸಂಗ್ರಹಿಸುತ್ತಾರೆ. ಚಳಿಗಾಲದಲ್ಲಿ ವಾತಾವರಣ ತಂಪಾಗಿದ್ದರೂ ಸಹ, ತಾಜಾತನ ಉಳಿಸಿಕೊಳ್ಳಲು ರೆಫ್ರಿಜರೇಟರ್ ಬಳಕೆ ಮಾಡುವುದು ಸಾಮಾನ್ಯ. ಆದರೆ ಆರೋಗ್ಯ ತಜ್ಞರ ಪ್ರಕಾರ, ಚಳಿಗಾಲದಲ್ಲಿ ಕೆಲವು ತರಕಾರಿಗಳನ್ನು ಫ್ರಿಡ್ಜ್‌ನಲ್ಲಿ ಸಂಗ್ರಹಿಸುವುದು ಸೂಕ್ತವಲ್ಲ. ಇದರಿಂದ ಅವುಗಳ ಗುಣಲಕ್ಷಣಗಳು ಬದಲಾಗುವುದಲ್ಲದೆ, ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗಬಹುದು.

ಬೆಳ್ಳುಳ್ಳಿ, ಈರುಳ್ಳಿ:
ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಅಡುಗೆಮನೆಯಲ್ಲೇ ಗಾಳಿಯಾಡುವ ಸಣ್ಣ ಬುಟ್ಟಿಯಲ್ಲಿ ಇಡುವುದು ಉತ್ತಮ. ಕೋಣೆಯ ಉಷ್ಣಾಂಶದಲ್ಲಿಯೇ ಇವು ದೀರ್ಘಕಾಲ ತಾಜಾವಾಗಿರುತ್ತವೆ. ಸಿಪ್ಪೆ ಸುಲಿದು ಅಥವಾ ಪೇಸ್ಟ್ ಮಾಡಿ ಫ್ರಿಡ್ಜ್‌ನಲ್ಲಿ ಇಟ್ಟರೆ, ಅವುಗಳ ಪೌಷ್ಟಿಕಾಂಶದ ಮೌಲ್ಯ ಕಡಿಮೆಯಾಗುತ್ತದೆ.

ಟೊಮೆಟೊ:
ಬಹುತೇಕ ಅಡುಗೆಗಳಲ್ಲಿ ಬಳಕೆಯಾಗುವ ಟೊಮೆಟೊವನ್ನು ಫ್ರಿಡ್ಜ್‌ನಲ್ಲಿ ಇಡುವ ಅಭ್ಯಾಸವಿದೆ. ಆದರೆ ತಜ್ಞರ ಪ್ರಕಾರ, ರೆಫ್ರಿಜರೇಟರ್‌ನಲ್ಲಿ ಇಟ್ಟರೆ ಟೊಮೆಟೊಗಳ ರುಚಿ ಮತ್ತು ವಿನ್ಯಾಸ ಹಾಳಾಗುತ್ತದೆ. ಜೊತೆಗೆ, ಅದರಲ್ಲಿರುವ ಉತ್ಕರ್ಷಣ ನಿರೋಧಕ ಗುಣಗಳೂ ನಾಶವಾಗುತ್ತವೆ. ಚಳಿಗಾಲದಲ್ಲಿ ಟೊಮೆಟೊವನ್ನು ಹೊರಗಡೆ ಇಟ್ಟರೂ ಒಂದು ವಾರದವರೆಗೆ ಕೆಡುವುದಿಲ್ಲ.

ಆಲೂಗಡ್ಡೆ:
ಆಲೂಗಡ್ಡೆಯನ್ನು ಫ್ರಿಡ್ಜ್‌ನಲ್ಲಿ ಸಂಗ್ರಹಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಜ್ಞರು ಎಚ್ಚರಿಸುತ್ತಾರೆ. ಫ್ರಿಡ್ಜ್‌ನಲ್ಲಿ ಇಟ್ಟಾಗ ಅದರಲ್ಲಿರುವ ಪಿಷ್ಟ ಸಕ್ಕರೆಯಾಗಿ ಪರಿವರ್ತನೆಯಾಗುತ್ತದೆ. ಇದು ಮಧುಮೇಹಿಗಳಷ್ಟೇ ಅಲ್ಲ, ಎಲ್ಲರ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ಶುಂಠಿ:
ಶುಂಠಿಯನ್ನು ಚಳಿಗಾಲದಲ್ಲಿ ಫ್ರಿಡ್ಜ್‌ನಲ್ಲಿ ಇಡುವುದರಿಂದ ಅದರಲ್ಲಿ ಶಿಲೀಂಧ್ರಗಳು ಬೆಳೆಯುವ ಸಾಧ್ಯತೆ ಹೆಚ್ಚಾಗುತ್ತದೆ. ಇಂತಹ ಶುಂಠಿಯನ್ನು ಸೇವಿಸಿದರೆ ಮೂತ್ರಪಿಂಡ ಮತ್ತು ಯಕೃತ್ತಿಗೆ ಹಾನಿ ಉಂಟಾಗಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.

ಸೊಪ್ಪು:
ಸೊಪ್ಪು ತರಕಾರಿಗಳನ್ನು ಗರಿಷ್ಠ 12 ಗಂಟೆಗಳವರೆಗೆ ಮಾತ್ರ ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಬಹುದು. ಅದಕ್ಕಿಂತ ಹೆಚ್ಚು ಕಾಲ ಇಟ್ಟರೆ ಅದರ ನೈಸರ್ಗಿಕ ಸುವಾಸನೆ, ವಿನ್ಯಾಸ ಮತ್ತು ಪೌಷ್ಟಿಕಾಂಶದ ಮೌಲ್ಯಕ್ಕೆ ಧಕ್ಕೆಯಾಗುತ್ತದೆ. ಇದಲ್ಲದೆ ಹೂಕೋಸು, ಕ್ಯಾರೆಟ್‌ಗಳನ್ನೂ ಚಳಿಗಾಲದಲ್ಲಿ ಫ್ರಿಡ್ಜ್‌ನಲ್ಲಿ ಸಂಗ್ರಹಿಸದೇ ಹೊರಗಡೆ ಸರಿಯಾದ ರೀತಿಯಲ್ಲಿ ಇಡುವುದು ಉತ್ತಮ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!