ನೂತನ ರಥ ಲೋಕಾರ್ಪಣೆ

0
rathotsava
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಬನಶಂಕರಿ ಬಡಾವಣೆಯಲ್ಲಿರುವ ಐತಿಹಾಸಿಕ ಬನಶಂಕರಿ ದೇವಸ್ಥಾನ ಕಳೆದ ೫ ವರ್ಷಗಳ ಹಿಂದೆ ಜೀರ್ಣೋದ್ಧಾರಗೊಂಡಿದ್ದು, ಐದನೆ ವರ್ಷದ ಅಂಗವಾಗಿ ಪ್ರಥಮ ಬಾರಿಗೆ ಜಾತ್ರೆ ಹಮ್ಮಿಕೊಳ್ಳಲಾಗಿದೆ.

Advertisement

ನಾರಾಯಣಪ್ಪ ಬೇವಿನಮರದ ಅವರ ನೇತೃತ್ವದಲ್ಲಿ ದೇವಾಂಗ ಸಮಾಜದ ಹಿರಿಯರು ಹಾಗೂ ವಿವಿಧ ಸಮಾಜದ ಭಕ್ತರ ಸಹಾಯದಿಂದ ಸುಮಾರು ೭೫ ಲಕ್ಷ ರೂ ವೆಚ್ಚದಲ್ಲಿ ದೇವಸ್ಥಾನ ಜೀರ್ಣೋದ್ಧಾರಗೊಂಡು ೨೦೧೯ರಲ್ಲಿ ಲೋಕಾರ್ಪಣೆಗೊಂಡಿತು. ಇದೀಗ ಸುಮಾರು ೭ ಲಕ್ಷ ರೂ ವೆಚ್ಚದಲ್ಲಿ ಹೊಸದಾಗಿ ರಥ ನಿರ್ಮಾಣಗೊಂಡಿದ್ದು, ಕುಂದಗೋಳ ತಾಲೂಕ ಮಳಲಿ ಗ್ರಾಮದ ಮುರಳೀಧರ ಬಡಿಗೇರ ರಥ ನಿರ್ಮಾಣ ಮಾಡಿದ್ದಾರೆ. ನೂತನವಾಗಿ ನಿರ್ಮಿಸಲ್ಪಟ್ಟ ರಥದ ಕಳಸಾರೋಹಣ ಹಾಗೂ ರಥೋತ್ಸವ ಕಾರ್ಯಕ್ರಮ ನಡೆಯಲಿದೆ.

ಫೆ.೨೨ರಂದು ಕಳಸಾರೋಹಣ ನೆರವೇರಿದ್ದು, ಫೆ.೨೩ರಂದು ಮುಂಜಾನೆ ೯.೩೦ರಿಂದ ಹೋಮ ಹವನ, ಪೂಜಾ ಕೈಂಕರ್ಯಗಳು, ಫೆ.೨೪ರಂದು ಭಾರತ ಹುಣ್ಣಿಮೆ ದಿವಸ ಮುಂಜಾನೆ ಶ್ರೀ ದೇವಿಗೆ ಅಭಿಷೇಕ, ವಿಶೇಷ ಅಲಂಕಾರ, ಮಂಜುನಾಥ ಬೇವಿನಮರದ ದಂಪತಿಗಳಿAದ ೧೦೦೮ ಮಹಿಳೆಯರಿಗೆ ಉಡಿ ತುಂಬುವುದು, ಮದ್ಯಾಹ್ನ ೧೨ ಗಂಟೆಯಿAದ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ನಡೆಯಲಿದೆ. ಸಂಜೆ ೫ಗಂಟೆಗೆ ನೂತನವಾಗಿ ನಿರ್ಮಾಣಗೊಂಡಿರುವ ರಥೋತ್ಸವ ಜರುಗಲಿದ್ದು, ಸಂಜೆ ೬ ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ.

ರಥೋತ್ಸವದ ದಿವ್ಯ ಸಾನ್ನಿಧ್ಯವನ್ನು ಹೂವಿನಶಿಗ್ಲಿ ವೀರಕ್ತಮಠದ ಮ.ನಿ.ಪ್ರ ಚನ್ನವೀರ ಮಹಾಸ್ವಾಮಿಗಳು ವಹಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾಬಳೇಶ್ವರಪ್ಪ ಬೇವಿನಮರದ, ಅತಿಥಿಗಳಾಗಿ ಶಿರಹಟ್ಟಿ ಮತಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ, ಜಿ.ಎಸ್. ಗಡ್ಡದೇವರಮಠ, ಬನಶಂಕರಿ ಸೇವಾ ಸಮಿತಿ ಅಧ್ಯಕ್ಷ ನಾರಾಯಣಪ್ಪ ಗಾರ್ಗಿ, ಲಕ್ಷö್ಮಣ ಮೆಡ್ಲೇರಿ ಪಾಲ್ಗೊಳ್ಳಲಿದ್ದಾರೆ. ಫೆ.೨೫ರಂದು ಸಂಜೆ ೫P ೆ್ಕ ಕಡುಬಿನಕಾಳಗ ನಡೆಯಲಿದೆ ಎಂದು ತಿಳಿಸಲಾಗಿದೆ.


Spread the love

LEAVE A REPLY

Please enter your comment!
Please enter your name here