ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಲ್ಲಿ ನವೀಕೃತ ಫಿಸಿಯೋಥೆರಪಿ ಲೋಕಾರ್ಪಣೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಗದಗ ಜಿಲ್ಲಾ ಶಾಖೆಯು ಅತ್ಯುತ್ತಮ ಸಮಾಜ ಸೇವೆ ಮಾಡುತಿದ್ದು, ವಿಕಲಾಂಗ ಚೇತನರಿಗೆ ಸ್ವಾವಲಂಬಿಯಾಗಲು ಉತ್ತಮ ಅವಕಾಶ ಮಾಡಿಕೊಡುತ್ತಿದೆ ಎಂದು ಕಾಂಗ್ರೆಸ್ ಯುವ ಮುಖಂಡ ಕೃಷ್ಣಗೌಡ ಹೆಚ್.ಪಾಟೀಲ ಅಭಿಪ್ರಾಯಪಟ್ಟರು.

Advertisement

ಭಾರತೀಯ ರೆಡ್ ಕ್ರಾಸ್ ಸಂಸ್ಥೆಗೆ ಗದಗ ತೇರಾಪಂಥ್ ಮಹಿಳಾ ಮಂಡಳ ಹಾಗೂ ಕೊಠಾರಿ ಕುಟುಂಬದವರು ದೇಣಿಗೆ ನೀಡಿದ ಸುಮಾರು 2 ಲಕ್ಷ ರೂ ಮೊತ್ತದ ಫಿಸಿಯೋಥೆರಪಿ ಉಪಕರಣಗಳೊಂದಿಗೆ ನವೀಕೃತ ಫಿಸಿಯೋಥೆರಪಿ ಉದ್ಘಾಟಿಸಿ ಅವರು ಮಾತನಾಡಿದರು.

ಸಚಿನ್ ಪಾಟೀಲ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಕೊಡಮಾಡಿದ 25 ಶ್ರವಣೋಪಕರಣಗಳನ್ನು ವಿತರಿಸಿ ಮಾತನಾಡಿ, ಈ ಸಾಧನಗಳು ಶಬ್ದಗಳನ್ನು ಆಲಿಸಿ ಭಾಷೆಯನ್ನು ಕಲಿಯಲು ಸಹಾಯ ಮಾಡುವುದಲ್ಲದೆ ಸಮಾಜದಲ್ಲಿ ಎಲ್ಲರ ಜೊತೆ ಬೆರೆತು ಸಾಮಾನ್ಯ ಜೀವನ ನಡೆಸಲು ಅತ್ಯುತ್ತಮ ಸಾಧನಗಳಾಗಿವೆ ಎಂದು ತಿಳಿಸಿದರು.

ಗಜೇಂದ್ರಗಡದ ಗಣ್ಯ ವ್ಯಾಪಾರಸ್ಥರು ಹಾಗೂ ಸಂಸ್ಥೆಯ ಹಿರಿಯ ಸದಸ್ಯರಾದ ಅಶೋಕ ಬಾಗಮಾರ ಮಾತನಾಡಿ, ಸೇವಾ ಮನೋಭಾವ ಹೊಂದಿರುವ ಈ ಸಂಸ್ಥೆಯ ಸೇವಾ ಕಾರ್ಯಗಳು ಪ್ರೇರಣೆಯಾಗಿದೆಯಲ್ಲದೆ, ಈ ಅರ್ಥಪೂರ್ಣ ಕಾರ್ಯಕ್ರಮ ಶ್ಲಾಘನೀಯ ಎಂದರು.

ಇದೇ ಸಂದರ್ಭದಲ್ಲಿ ವರ್ಕ್ಶಾಪ್‌ನಲ್ಲಿ ಪಿ & ಓ ತಂತ್ರಜ್ಞರಾದ ತಸ್ಲಂಅಲಿ ಜಿ ಮುಲ್ಲಾ ತಯಾರಿಸಿದ ಎರಡು ಕೃತಕ ಕಾಲು, ಶೂ ಮೇಕರ್ ಶಿವಯೋಗಿ ಬೆಳವಡಿ ತಯಾರಿಸಿದ ವಕ್ರಪಾದ ಸ್ಯಾಂಡಲ್ಸ್ & ಹ್ಯಾಂಡ್ ಸ್ಯಾಂಡಲ್ಸ್ ವಿತರಿಸಲಾಯಿತು.

ಕಾರ್ಯಕ್ರಮದ ಔಚಿತ್ಯವನ್ನು ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ನಡೆದುಬಂದ ದಾರಿಯನ್ನು ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಡಾ. ಎಮ್.ಡಿ. ಸಮುದ್ರಿ ವಿವರಿಸಿದರು. ಸಭಾಪತಿಗಳಾದ ಡಾ. ಆರ್.ಎನ್. ಗೋಡಬೋಲೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಅಶೋಕ ಜೈನ್, ಉಪಸಭಾಪತಿಗಳಾದ ನಾರಾಯಣಪ್ಪ ಇಲ್ಲೂರು, ಲಂಡನ್‌ನಿಂದ ಆಗಮಿಸಿದ ಡಾ. ಬೂದಿಹಾಳ ದಂಪತಿಗಳು, ಆಡಳಿತ ಮಂಡಳಿಯ ಸದಸ್ಯರು ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಹಿರಿಯ ಸದಸ್ಯರು ಉಪಸ್ಥಿತರಿದ್ದರು.

ವಾಗ್ದೇವಿ ಜಿ.ಕುಲಕರ್ಣಿ ಪ್ರಾರ್ಥಿಸಿ ಕಾರ್ಯಕ್ರಮ ನಿರೂಪಿಸಿದರು. ವರದಾ ಎನ್.ಕೋಲಕಾರ ವಂದಿಸಿದರು.

ದಾನಿಗಳಾದ ಗೀತಾ ಗುಡೇನಕಟ್ಟಿ, ನಜಬುನ್ನೀಸ್ಸಾಬೇಗಂ ಡಿ.ಸಮುದ್ರಿ, ಡಾ. ಎಸ್.ಎಸ್. ಬೂದಿಹಾಳ, ವಿಜಯಲಕ್ಷ್ಮೀ ಬೂದಿಹಾಳ, ತಜ್ಞ ವೈದ್ಯರಾದ ಡಾ. ಚಂದ್ರಶೇಖರ ಬಳ್ಳಾರಿ, ಡಾ. ಪ್ರಶಾಂತ ಪಾಟೀಲ, ಹುಬ್ಬಳ್ಳಿಯ ಶ್ರವಣ ತಜ್ಞರಾದ ಪ್ರಶಾಂತಗೌಡ ಪಾಟೀಲ ಹಾಗೂ ಕೊಠಾರಿ ಕುಟುಂಬದವರನ್ನು ಸನ್ಮಾನಿಸಲಾಯಿತು.


Spread the love

LEAVE A REPLY

Please enter your comment!
Please enter your name here