ವಿಜಯನಗರ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯ ಪ್ರವಾಸದ ವೇಳೆ ಹಂಪಿಯ ವಿರುಪಾಕ್ಷೇಶ್ವರ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದರು. ದೇವರ ಆಶೀರ್ವಾದ ಪಡೆದ ಬಳಿಕ, ಅವರು ದೇಶದ ಕ್ಷೇಮಕ್ಕಾಗಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಆನೆ ಲಕ್ಷ್ಮಿಯು ಅವರಿಗೆ ಹೂವಿನ ಹಾರ ಹಾಕಿ ಸ್ವಾಗತಿಸಿತು.
Advertisement
ಪೂಜೆ ಬಳಿಕ ಮಾತನಾಡಿದ ನಿರ್ಮಲಾ ಸೀತಾರಾಮನ್, ಹಂಪಿಯ ಸಾಂಸ್ಕೃತಿಕ ಪರಂಪರೆ ನೋಡಲು ನನಗೆ ಬಹಳ ದಿನಗಳಿಂದ ಇಚ್ಛೆ ಇತ್ತು. ಇಂದು ಆ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಇಲ್ಲಿ ಕಾಣುವ ಪ್ರತಿಯೊಂದು ಶಿಲೆಯೂ ನಮ್ಮ ದೇಶದ ಇತಿಹಾಸ ಮತ್ತು ಸಂಸ್ಕೃತಿಯ ಪ್ರತೀಕ ಎಂದರು.
ಇನ್ನೂ ಯುನೆಸ್ಕೋ ಗುರುತಿಸಿರುವ ಈ ಐತಿಹಾಸಿಕ ತಾಣದ ಅಭಿವೃದ್ಧಿ ಮತ್ತು ಸಂರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಹಂಪಿಯಂತಹ ಪಾರಂಪರಿಕ ಸ್ಥಳಗಳು ಭಾರತದ ಸಾಂಸ್ಕೃತಿಕ ಶಕ್ತಿಯ ಪ್ರತೀಕವಾಗಿವೆ ಎಂದು ಹೇಳಿದರು.