ಬೀದರ್: ಸಿಎಂ ಸಿದ್ದರಾಮಯ್ಯ ಅವರ ಕಾವೇರಿ ನಿವಾಸದಲ್ಲಿ ಏರ್ಪಡಿಸಲಾಗಿದ್ದ ಔತಣಕೂಟವೂ ರಾಜ್ಯ ರಾಜ್ಯಕೀಯದಲ್ಲಿ ಭಾರಿ ಚರ್ಚೆಯನ್ನು ಹುಟ್ಟು ಹಾಕಿತ್ತು. ಸಚಿವರೆಲ್ಲರೂ ಇದು ಔತಣಕೂಟವಷ್ಟೇ ಬೇರೆನೂ ವಿಶೇಷತೆ ಇಲ್ಲ ಎಂದಿದ್ದರು.
ಇದೀಗ ನವೆಂಬರ್‌ನಲ್ಲಿ ನಿತಿನ್ ಗಡ್ಕರಿ ಪ್ರಧಾನಿಯಾಗುವ ಮೂಲಕ ‘ನವೆಂಬರ್ ಕ್ರಾಂತಿ’ ಆಗಬಹುದು ಎಂದು ಸಚಿವ ಸಂತೋಷ್ ಲಾಡ್ ಹೊಸ ಬಾಂಬ್ ಸಿಡಿಸಿದ್ದಾರೆ. ಬೀದರ್ ನಲ್ಲಿ ಮಾತನಾಡಿದ ಅವರು,
ಡಿನ್ನರ್ ಮೀಟಿಂಗ್‌ನಲ್ಲಿ ಸಂಪುಟ ಪುನರ್ ರಚನೆ ಬಗ್ಗೆ ಮಾತನಾಡಿಲ್ಲ. ಸಂಪುಟ ಪುನರ್‌ರಚನೆ ಮಾಡುವುದಾದ್ರೆ ಸಿಎಂ ಡಿಸಿಎಂಗೆ ಪೂರ್ಣ ಅಧಿಕಾರ ಇದೆ, ಮಾಡಲಿ. ಅಲ್ಲದೇ ನಮಗೂ ಕೇಂದ್ರದ ʻನವಂಬರ್ ಕಾಂತ್ರಿʼ ಬಗ್ಗೆ ಕುತೂಹಲವಿದೆ. ನಿತಿನ್ ಗಡ್ಕರಿ ಅವರು ಪ್ರಧಾನಿ ಆಗ್ತಾರೆ ಅನ್ನೋ ಮಾಹಿತಿ ಇದೆ ಎಂದು ಹೇಳಿದ್ದಾರೆ.
ಇನ್ನೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಆರ್‌ಎಸ್‌ಎಸ್ ಬ್ಯಾನ್ ಬಗ್ಗೆ ಮಾತನಾಡಿ, 145 ಕೋಟಿ ಭಾರತೀಯರೂ ದೇಶ ಪ್ರೇಮಿಗಳೇ ಆರ್‌ಎಸ್‌ಎಸ್‌ಗೆ ವಿಶೇಷವಾಗಿ ದೇಶ ಪ್ರೇಮ ಇಲ್ಲ. ಈ ಹಿಂದೇ 3 ಸಾವಿರ ಕೋಟಿ ಖರ್ಚು ಮಾಡಿ ಸರ್ದಾರ್ ವಲ್ಲಭಭಾಯ್ ಪಟೇಲ್ ಪ್ರತಿಮೆ ನಿರ್ಮಾಣ ಮಾಡಿದ್ದು ಅವರು ಕಾಂಗ್ರೆಸ್‌ನಲ್ಲಿ ಇದ್ದಾಗ ಪ್ರತಿಮೆ ಮಾಡಲು ಬಿಜೆಪಿ ವಿರೋಧ ಮಾಡಿದ್ರು ಎಂದು ಕುಟುಕಿದರು.