ಬೆಂಗಳೂರು:-ನಾನು D Boss ಅಭಿಮಾನಿ ಎಂದು ಹೇಳಿಕೊಳ್ಳಲು ಯಾವುದೇ ಭಯವಿಲ್ಲ ಎಂದು ಬಿಗ್ ಬಾಸ್ 2ನೇ ರನ್ನರ್ ಅಪ್ ರಜತ್ ಹೇಳಿದ್ದಾರೆ.
ಬಿಗ್ ಬಾಸ್ ಜರ್ನಿ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ರಜತ್ ಅವರು, ನಾನು ಬಿಗ್ ಬಾಸ್‌ನಲ್ಲಿದ್ರೂ ಎಂದಿಗೂ ಡಿಬಾಸ್ ಅಭಿಮಾನಿ, ಅದನ್ನು ಹೇಳಿಕೊಳ್ಳೋಕೆ ಭಯವಿಲ್ಲ. ನನಗೆ ದರ್ಶನ್ ಅವರನ್ನು 3-4 ಬಾರಿ ಭೇಟಿಯಾಗಿದ್ದೇನೆ. ಅವರೊಂದಿಗೆ ಉತ್ತಮ ಒಡನಾಟವಿದೆ ಎಂದರು.
ಇನ್ನೂ ಸುದೀಪ್ ಸರ್ ಹೇಳಿದ ಹಾಗೆ ಇತಿಹಾಸದಲ್ಲೇ ಫಸ್ಟ್ ಟೈಮ್ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದು ಟಾಪ್ 3 ಆಗೋದು ದೊಡ್ಡ ವಿಚಾರ. ನಾನು ಕೂಡ ಗೆಲ್ತೀನಿ ಅಂತಲೇ ಬಂದೆ ಆದರೆ ಕರ್ನಾಟಕದಲ್ಲಿ ಗಾಂಧೀಜಿ ಬಂದು ನಿಂತರೂ ಹನುಮಂತನ ಮುಂದೆ ಗೆಲ್ಲೋಕೆ ಆಗಲ್ಲ. ಹಾಗಾಗಿ ಮತ್ತೆ ಏನು ಅಂತ ಹೊಡೆದಾಡೋಣ, ಹಾಗಾಗಿ ಗೆದ್ದಿಲ್ಲ ಅನ್ನೋ ಬೇಸರವಿಲ್ಲ ಎಂದಿದ್ದಾರೆ.
ಬಿಗ್ ಬಾಸ್ ಮನೆ ಮತ್ತು ಅವರ ವಾಯ್ಸ್ ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಆ ಮನೆ ತುಂಬಾ ಕಲಿಸಿಕೊಡ್ತು, ಸ್ವಾಭಿಮಾನ ಕಲಿಸಿಕೊಟ್ಟಿದೆ. ಈ ಹಿಂದೆ 3 ಸೀಸನ್‌ಗಳಿಂದ ಕಾಲ್ ಬಂದಿತ್ತು. ಆದರೆ ಆಗಿರಲಿಲ್ಲ. ನನ್ನ ವ್ಯಕ್ತಿತ್ವ ಹೇಗೆ ಇತ್ತೋ ನಾನು ಆ ಪ್ರಕಾರ ನಡೆದುಕೊಂಡಿದ್ದೇನೆ. ಅದು ಜನಕ್ಕೆ ಇಷ್ಟ ಆಗಿದೆ. ಅದರ ಬಗ್ಗೆ ಖುಷಿಯಿದೆ ಎಂದು ರಜತ್ ಹೇಳಿದ್ದಾರೆ.