ಸ್ಯಾಂಡಲ್ವುಡ್ನಲ್ಲಿ ಇತ್ತೀಚೆಗೆ ಸ್ಟಾರ್ ವಾರ್, ಫ್ಯಾನ್ಸ್ ವಾರ್ ವಿಚಾರ ಜೋರಾಗಿ ಕೇಳಿಬರುತ್ತಿರುವ ನಡುವೆಯೇ, ನಟ ಶಿವರಾಜ್ಕುಮಾರ್ ಅಭಿನಯದ ‘45’ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿದೆ.
ಫಸ್ಟ್ ಡೇ ಫಸ್ಟ್ ಶೋ ವೀಕ್ಷಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಣ್ಣ, ಅಭಿಮಾನಿಗಳ ನಡುವಿನ ಗೊಂದಲಗಳಿಗೆ ಸ್ಪಷ್ಟ ಹಾಗೂ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. “ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಯಾರ ಮನೆಯನ್ನೂ ಒಡೆಯಲು ಹೋಗಬಾರದು. ಯಾರ ಭಾವನೆಗಳ ಜೊತೆಗೆ ಆಟ ಆಡಬಾರದು. ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಬೇಕು. ಬದುಕೋಣ, ಬದುಕಲು ಬಿಡೋಣ ಎಂಬ ಭಾವನೆ ಎಲ್ಲರಲ್ಲೂ ಇರಬೇಕು. ನಾವು ಇರುವಷ್ಟು ದಿನ ಅನ್ಯೋನ್ಯವಾಗಿ ಹೊಂದಿಕೊಂಡು ಇರಬೇಕು,” ಎಂದು ಶಿವರಾಜ್ಕುಮಾರ್ ಹೇಳಿದ್ದಾರೆ.
ಒಂದೇ ಸಿನಿಮಾದಲ್ಲಿ ಮೂವರು ಪ್ರಮುಖ ನಟರು ಅಭಿನಯಿಸಿರುವ ‘45’ ಚಿತ್ರದ ಬಿಡುಗಡೆಯ ಸಂದರ್ಭದಲ್ಲೇ ಈ ಸಂದೇಶ ರವಾನಿಸಿರುವ ಶಿವಣ್ಣ, ಫ್ಯಾನ್ಸ್ ವಾರ್ಗೆ ಅಂತ್ಯವಾಗಬೇಕೆಂಬ ತಮ್ಮ ಆಶಯವನ್ನು ವ್ಯಕ್ತಪಡಿಸಿದರು. ಈ ಮೂಲಕ ತಮ್ಮ ಅಭಿಮಾನಿಗಳಿಗೂ ಸಮಾಜಕ್ಕೂ ಒಂದು ಸಕಾರಾತ್ಮಕ ಸಂದೇಶವನ್ನು ಪಾಸ್ ಮಾಡಿದ್ದಾರೆ. ಇನ್ನು ಮುಂದಾದರೂ ಫ್ಯಾನ್ಸ್ ವಾರ್ಗೆ ತೆರೆ ಬೀಳುತ್ತದೆಯೇ ಎಂಬುದು ಕಾದು ನೋಡಬೇಕಿದೆ.



